ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿಗೆ ಇದೀಗ ಸುಪ್ರಿಂ ಕೋರ್ಟ್ ಎಂಟ್ರಿ ಕೊಟ್ಟಿದ್ದು, ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವ ಕಾರ್ಯ ಆರಂಭಿಸಿದ ಉಪಸಭಾಪತಿಯ ನಿರ್ಧಾರವನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಹಾಗೂ ಇತರೆ ರೆಬಲ್ ಶಾಸಕರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದೆ.
ಶಿವಸೇನೆಯ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್ನ ನ್ಯಾಯಮೂರ್ತಿಗಳಾದ ರಂಜನ್ ಗೊಗಯ್, ನ್ಯಾಯಮೂರ್ತಿ ದೀಪಕ್ ಗುಪ್ತ ಹಾಗೂ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠ ಇಂದು ವಿಚಾರಣೆ ನಡೆಸಿದೆ.
ಶಿವಸೇನೆಯ ಬಂಡಾಯ ಶಾಸಕರಿಗೆ ಜುಲೈ 12 ರಂದು ಸಾಯಂಕಾಲ 5.30ರ ಒಳಗೆ ಸ್ಪೀಕರ್ ನೋಟಿಸ್ಗೆ ಉತ್ತರ ನೀಡುವಂತೆ ಸುಪ್ರಿಂಕೋರ್ಟ್ನ ಈ ಪೀಠ ಸೂಚಿಸಿದೆ.
ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿಕೆ ಮಾಡಿದೆ.