ಯುವ ನಟಿಗೆ ಲೈಂಗಿಕ ಕಿರುಕುಳ : ನಟನ ಬಂಧನ

ಯುವ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಲಯಾಳಂ ನಟ ಹಾಗೂ ನಿರ್ಮಾಪಕ ರಮೇಶ್ ಬಾಬು ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ನಟ ವಿಜಯ್ ಬಾಬು ಅವರನ್ನು ಬಂಧಿಸಿರುವ ಪೊಲೀಸರು ಜುಲೈ 3ರವೆರೆಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಕಳೆದ ವಾರ ವಿಜಯ್‌ಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಯುವನಟಿಯ ಫೋಟೋವನ್ನು ವಿಜಯ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇದರ ವಿರುದ್ಧ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಇದೀಗ, ಸೋಮವಾರ ಜುಲೈ 3ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ವಿಚಾರಣೆಗೆ ಅನುಮತಿ ನೀಡಲಾಗಿದೆ. ಇನ್ನು ವಿಚಾರಣೆಯ ನಂತರ ಅಸಲಿ ಸತ್ಯವೇನು ಎಂಬುದನ್ನ ಕಾದುನೋಡಬೇಕಿದೆ.

ಏನಿದು ಪ್ರಕರಣ :

ಸಂತ್ರಸ್ತ ನಟಿಯು ನಟ ಹಾಗೂ ನಿರ್ಮಾಪಕ ರಮೇಶ್ ಬಾಬು ವಿರುದ್ಧ ಸಾಮಾಜಿಕ ಜಾಲತಾಣ ಪೇಸ್​ಬುಕ್​ನಲ್ಲಿ ತನ್ನ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಳು. ಅನಂತರ ನಟಿ ಪ್ರಕರಣ ದಾಖಲಿಸಿದ್ದಾರೆ.

ತಮ್ಮ ಪೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದ ನಟಿ, ನಟ ರಮೇಶ್ ಬಾಬು ಅವರು ಕೇರಳದ ಎರ್ನಾಕುಲಂನಲ್ಲಿರುವ ಅವರ ಅಪಾರ್ಟ್​ಮೆಂಟ್​ನಲ್ಲಿ ಹಲವು ಸಲ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಮೊದಲು ಅವರು ಚಿತ್ರರಂಗದಲ್ಲಿ ಉತಮ್ಮ ಅವಕಾಶ ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ.

ಆ ಬೆನ್ನಲ್ಲೇ ಏಪ್ರೀಲ್ 26 ರಂದು ಸಾಮಾಜಿಕ ಜಾಲತಾಣದ ಮೂಲಕ ಲೈವ್​ ಬಂದಿದ್ದ ನಟ ರಮೇಶ್ ಬಾಬು ಯುವ ನಟಿ ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಈ ಪ್ರಕರಣದಲ್ಲಿ ಆ ಯುವತಿಯೇ ಪ್ರಮುಖ ಆರೋಪಿ ಎಂದು ಆಪಾದಿಸಿದ್ದರು.

LEAVE A REPLY

Please enter your comment!
Please enter your name here