ಬೆಂಗಳೂರು ಬಳಿಕ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮುಂದಾಗಿದೆ.
ಮೂಲಗಳ ಮಾಹಿತಿ ಪ್ರಕಾರ ಕಳೆದ ವರ್ಷ ನಿಧನರಾದ ಉಮೇಶ್ ಕತ್ತಿ (Umesh Katti) ಅವರ ಸಹೋದರ ರಮೇಶ್ ಕತ್ತಿಗೆ (Ramesh Katti) ಕಾಂಗ್ರೆಸ್ ಆಹ್ವಾನ ನೀಡಿದೆ.
ವಿಧಾನಪರಿಷತ್ ಸದಸ್ಯರೂ ಆಗಿರುವ ಕಾಂಗ್ರೆಸ್ನ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಅವರು ಕತ್ತಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ಗೆ ಬಂದರೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.
2009ರಲ್ಲಿ ರಮೇಶ್ ಕತ್ತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು.
ಆದರೆ ರಮೇಶ್ ಕತ್ತಿ ಅವರು ಸಹೋದರ ಉಮೇಶ್ ಕತ್ತಿ ಅವರು ಪ್ರತಿನಿಧಿಸ್ತಿದ್ದ ಹುಕ್ಕೇರಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಆದರೆ ಕತ್ತಿ ನಿಧನದ ಬಳಿಕ ಕಾಂಗ್ರೆಸ್ನ ಎ ಬಿ ಪಾಟೀಲ್ ಅವರು ಕ್ಷೇತ್ರದಲ್ಲಿ ಇನ್ನಷ್ಟು ಹಿಡಿತ ಸಾಧಿಸಿರುವ ಕಾರಣ ಈ ಬಾರಿ ಕಾಂಗ್ರೆಸ್ ಎ ಬಿ ಪಾಟೀಲ್ ಅವರಿಗೆ ಹುಕ್ಕೇರಿಯಿಂದ ಟಿಕೆಟ್ ನೀಡುತ್ತಿದೆ.
ಈ ಹಿನ್ನೆಲೆಯಲ್ಲಿ ಹುಕ್ಕೇರಿ ಬದಲು ರಮೇಶ್ ಕತ್ತಿ ಅವರಿಗೆ ನಿಪ್ಪಾಣಿ ಟಿಕೆಟ್ ನೀಡುವ ಪ್ರಸ್ತಾಪ ಕಾಂಗ್ರೆಸ್ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
2018 ಮತ್ತು 2013ರಲ್ಲಿ ಎರಡು ಬಾರಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ADVERTISEMENT
ADVERTISEMENT