ಮಾಹಿತಿ ತಂತ್ರಜ್ಞಾನ (Information Technology) ಕಂಪನಿ ಆಕ್ಸೆಂಚರ್ 19 ಸಾವಿರ ನೌಕರರನ್ನು ಕೆಲಸದಿಂದ ತೆಗೆದುಹಾಕಲಿದೆ.
ಮುಂದಿನ 18 ತಿಂಗಳಲ್ಲಿ ಅಂದರೆ ಒಂದೂವರೆ ವರ್ಷದಲ್ಲಿ ಕಂಪನಿಯ ಒಟ್ಟು ನೌಕರರ ಪೈಕಿ ಶೇಕಡಾ 2.5ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದೆ.
ಜಾಗತಿಕ ಆರ್ಥಿಕ ಕುಸಿತದ ಕಾರಣದಿಂದ ಕಂಪನಿಗಳು ತಂತ್ರಜ್ಞಾನಕ್ಕಾಗಿ ಹೂಡಿಕೆ ಕಡಿತಗೊಳಿಸಬಹುದು ಎಂಬ ಹಿನ್ನೆಲೆಯಲ್ಲಿ ಆಕ್ಸೆಂಚರ್ ನೌಕರಿ ಕಡಿತದ ತೀರ್ಮಾನ ಕೈಗೊಂಡಿದೆ.
ಆದರೆ 2023ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಹೊಸ ನೌಕರರನ್ನು ನೇಮಿಸಿಕೊಳ್ಳುತ್ತೇವೆ ಎಂದು ಕಂಪನಿ ಹೇಳಿದೆ.
ADVERTISEMENT
ADVERTISEMENT