ಮೆಂಥೋಪ್ಲಸ್ ಚಿಕ್ಕ ಡಬ್ಬಿ ನುಂಗಿ ಮಗು ಸಾವು – ಮದುವೆಯಾಗಿ 10 ವರ್ಷಗಳ ಬಳಿಕ ಜನಿಸಿದ್ದ ಮಗು

ಮೆಂಥೋಪ್ಲಸ್ ಚಿಕ್ಕ ಡಬ್ಬಿ ನುಂಗಿ 9 ತಿಂಗಳ ಮಗು ಸಾವನ್ನಪ್ಪಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಇಂದಿರಾನಗರದಲ್ಲಿ ಘಟನೆ ನಡೆದಿದೆ. 
ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ ಮೃತ ಮಗು.
ಆಟವಾಡುತ್ತಿದ್ದಾಗ ಮೆಂಥೋಪ್ಲಸ್ ಚಿಕ್ಕ ಡಬ್ಬಿಯನ್ನು ಮಗು ನುಂಗಿತ್ತು. ಮಗುವಿಗೆ ಉಸಿರಾಟ ತೊಂದರೆ  ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಪೋಷಕರು ಕರೆದೊಯ್ದಿದ್ದಾರೆ.
ಆದರೆ  ಮಾರ್ಗಮಧ್ಯೆಯೇ ಮಗು ಮೃತಪಟ್ಟಿದೆ ವೈದ್ಯರು  ದೃಢಪಡಿಸಿದ್ದಾರೆ. 
ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಈ ಮಗು ಜನಿಸಿತ್ತು.