ಜುಲೈ 3ರಿಂದ 10 ದಿನ ವಿಧಾನಮಂಡಲದ ಅಧಿವೇಶನ

ಜುಲೈ 3ರಿಂದ ಕರ್ನಾಟಕ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ.
ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾಗಿರುವ ಹಿನ್ನೆಲೆಯಲ್ಲಿ ಜುಲೈ 3ರಂದು ರಾಜ್ಯಪಾಲರು ವಿಧಾನಸಭೆ ಮತ್ತು ವಿಧಾನಪರಿಷತ್​ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಜುಲೈ 8 ಮತ್ತು ಜುಲೈ 9ರಂದು ಶನಿವಾರ ಮತ್ತು ಭಾನುವಾರ ಎರಡು ದಿನ ಅಧಿವೇಶನ ನಡೆಯಲ್ಲ. ಉಳಿದಂತೆ ಒಟ್ಟು ಹತ್ತು ದಿನ ಅಧಿವೇಶನ ನಡೆಯಲಿದೆ.
ಜುಲೈ 14ರಂದು ಶುಕ್ರವಾರ ಅಧಿವೇಶನ ಕೊನೆಯಾಗಲಿದೆ.
ಜುಲೈ 7ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೊಸ ಸರ್ಕಾರದ ಮೊಟ್ಟ ಮೊದಲ ಬಜೆಟ್​ ಮಂಡಿಸಲಿದ್ದಾರೆ.