ಇದು ವಂದೇ ಭಾರತ್ ರೈಲಿನ ಅಸಲಿ ಕತೆ

ಸದ್ಯ ದೇಶದಲ್ಲಿ 22 ವಂದೇ ಭಾರತ್ ರೈಲುಗಳಿವೆ. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವುಳ್ಳ ವಂದೆ ಭಾರತ್ ರೈಲುಗಳಿಗೆ ಈಗ 130 ಕಿಲೋಮೀಟರ್ ವೇಗದಲ್ಲಿ ಮಾತ್ರವೇ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ,ಈವರೆಗೂ ಆ ವೇಗವನ್ನು ಕೂಡ ಯಾವುದೇ ವಂದೇಭಾರತ್ ರೈಲು ರೀಚ್ ಆಗಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಣಾಸಿಯಿಂದ ಪ್ರಾರಂಬಿಸಿದ ಮೊದಲ ವಂದೇ ಭಾರತ್ ರೈಲು 96 ಕಿಲೋಮೀಟರ್ ವೇಗದಲ್ಲಿ ಚಲಿಸಿತ್ತು. ಆದರೆ, ಸರಾಸರಿ ವೇಗ ಇನ್ನಷ್ಟು ಕಡಿಮೆ ಇದೆ.

ರೈಲ್ವೇ ಟ್ರ್ಯಾಕ್ ಸಾಮರ್ಥ್ಯ ಹೆಚ್ಚಿಸದೇ ನಿರ್ದೇಶಿತ ವೇಗವನ್ನು ತಲುಪುವುದು ಸುಲಭವಲ್ಲ.. ರೈಲುಗಳ ವೇಗ ಹೆಚ್ಚಬೇಕು ಎಂದರೇ ಟ್ರ್ಯಾಕ್ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ ಕವಚ್‌ನಂತಹ ಭದ್ರತಾ ವ್ಯವಸ್ಥೆಗಳು ಕೂಡ ಅತ್ಯಗತ್ಯ ಎಂಬುದು ಪರಿಣಿತರ ಮಾತು.

ದೇಶದಲ್ಲಿ ಈಗಿರುವ  ಟ್ರ್ಯಾಕ್ ಮತ್ತು ಸಂಪನ್ಮೂಲಗಳು 130 ಕಿಲೋಮೀಟರ್ ವೇಗಕ್ಕಷ್ಟೇ ಸರಿ ಹೊಂದುತ್ತವೆ. ಆದರೆ, ಸೆಮಿ ಹೈಸ್ಪೀಡ್ ರೈಲುಗಳ ವೇಗಕ್ಕೆ ಹಳಿಗಳು ಸರಿಹೋಗಲ್ಲ.

ವಂದೇ ಭಾರತ್ ರೈಲುಗಳ ಸರಾಸರಿ ವೇಗ ಎಷ್ಟು ಎಂದು ಮಧ್ಯಪ್ರದೇಶದ ಆರ್‌ಟಿಐ ಆಕ್ಟಿವಿಸ್ಟ್ ಚಂದ್ರಶೇಖರ್ ಗವಾರ್ ಕೇಳಿದ ಪ್ರಶ್ನೆಗೆ ರೈಲ್ವೇ ಇಲಾಖೆ ಉತ್ತರಿಸಿದೆ.

2021-22ರ ಸಾಲಿನಲ್ಲಿ ವೆಂದೇಭಾರತ್ ರೈಲುಗಳ ಸರಾಸರಿ ವೇಗ ಗಂಟೆಗೆ 84.8 ಕಿಲೋಮೀಟರ್..

2022-23 ರ ಸಾಲಿನಲ್ಲಿ ವೆಂದೇಭಾರತ್ ರೈಲುಗಳ ಸರಾಸರಿ ವೇಗ ಗಂಟೆಗೆ 81.38 ಕಿಲೋಮೀಟರ್..

ಅಂದರೇ, ಸೆಮಿ ಹೈಸ್ಪೀಡ್ ರೈಲುಗಳನ್ನು ನಡೆಸಬೇಕೆಂಬ ವಿಷನ್ ಇದ್ದರೂ, ಆ ಲಕ್ಷ್ಯ ಮಾತ್ರ ಈಡೇರುತ್ತಿಲ್ಲ

ತುಂಬಾ ಮಂದಿ ಈ ರೈಲುಗಳ ವೇಗದ ಬಗ್ಗೆ ಮಾತನಾಡುತ್ತಾರೆ. ಆದ್ರೆ, ನಿರ್ದೇಶಿತ ವೇಗವನ್ನು ರೀಚ್ ಆಗುವಲ್ಲಿ ವಿಫಲವಾಗುತ್ತಿವೆ.

ಇದರೊಂದಿಗೆ ಅವುಗಳ ಸಮಯ ಪಾಲನೆ ಕೂಡ ಆಗುತ್ತಿಲ್ಲ ಎಂಬುದು ಪ್ರಯಾಣಿಕರ ಅಸಮಾಧಾನ.