ಕರ್ನಾಟಕ ವಿಧಾನಸಭಾ ಚುನಾವಣೆ: ಬಿಜೆಪಿ ಗುಪ್ತಚರ ಸಮೀಕ್ಷೆಯಲ್ಲಿ ಬಿಜೆಪಿಗೆ ಸೋಲಿನ ಸುಳಿವು

Karnataka Assembly Election
Karnataka Assembly Election

ಕರ್ನಾಟಕ ವಿಧಾನಸಭಾ ಚುನಾವಣೆಗೆ ಐದು ತಿಂಗಳು ಬಾಕಿ ಇರುವ ಹೊತ್ತಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲಿ ಆಂತರಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಪ್ತಚರದಳ ಮುಖಾಂತರ ನಡೆಸಲಾಗಿರುವ ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎನ್ನಲಾಗಿದೆ.

ಬಿಜೆಪಿಗೆ ಸೋಲಿನ ಸುಳಿವು:

ಸಮೀಕ್ಷೆಯ ಪ್ರಕಾರ ಕರ್ನಾಟಕ ವಿಧಾನಸಭೆಯ ಒಟ್ಟು 224 ಕ್ಷೇತ್ರಗಳ ಪೈಕಿ ಬಿಜೆಪಿಗೆ ಕೇವಲ 80 ಸ್ಥಾನಗಳು ಸಿಗಬಹುದು ಎಂಬ ಮಾಹಿತಿ ಸಿಕ್ಕಿದೆ.

2018ರಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅದಾದ ಬಳಿಕ ಆಪರೇಷನ್​ ಕಮಲ ಕಾರಣದಿಂದಾಗಿ ಪಕ್ಷದ ಬಲಾಬಲ 121 ಸ್ಥಾನಗಳಿಗೆ ಏರಿಕೆ ಆಯಿತು. ಅಂದರೆ ಗುಪ್ತಚರ ಸಮೀಕ್ಷೆ ಮೂಲಕ ಬಿಜೆಪಿಗೆ ಕನಿಷ್ಠ 40 ಸೀಟುಗಳು ನಷ್ಟ ಆಗುವ ನಿರೀಕ್ಷೆ ಇದೆ.

ಕಾಂಗ್ರೆಸ್​​ಗೆ ಎಷ್ಟು..?

ಬಿಜೆಪಿ ರಾಷ್ಟ್ರೀಯ ನಾಯಕರು ನಡೆಸಿದ್ದಾರೆ ಎನ್ನಲಾಗಿರುವ ಈ ಗುಪ್ತಚರ ಸಮೀಕ್ಷೆಯಲ್ಲಿ ಕಾಂಗ್ರೆಸ್​​ಗೆ ಅತೀ ಹೆಚ್ಚು ಸ್ಥಾನಗಳನ್ನು ತೋರಿಸಲಾಗಿದೆ. 108 ಸೀಟುಗಳನ್ನು ಗೆದ್ದು 2023ರ ಚುನಾವಣೆಯಲ್ಲಿ ಕಾಂಗ್ರೆಸ್​ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಸರ್ಕಾರ ರಚನೆಗೆ ಕೇವಲ 4 ಶಾಸಕರ ಕೊರತೆ ಕಾಡಲಿದೆ ಎನ್ನುವುದು ಬಿಜೆಪಿ ನಡೆಸಿರುವ ಸಮೀಕ್ಷೆಯ ಅಂದಾಜು.

2018ರಲ್ಲಿ ಕಾಂಗ್ರೆಸ್​ 80 ಸ್ಥಾನಗಳನ್ನು ಗೆದ್ದಿತ್ತು. ಅಂದರೆ ಬಿಜೆಪಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್​​ಗೆ 28 ಸ್ಥಾನಗಳ ಹೆಚ್ಚಳ ಆಗುವ ನಿರೀಕ್ಷೆ ಇದೆ.

ಜೆಡಿಎಸ್​​ಗೆ ಎಷ್ಟು..?

ಬಿಜೆಪಿ ನಡೆಸಿರುವ ಸಮೀಕ್ಷೆಯ ಪ್ರಕಾರ ಜೆಡಿಎಸ್​ಗೆ 36 ಸೀಟುಗಳು ಸಿಗಬಹುದು. ಕಳೆದ ಬಾರಿ ಜೆಡಿಎಸ್​ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಅಷ್ಟೇ ಸೀಟು ಪಡೆಯಬಹುದು ಎನ್ನುವುದು ಅಂದಾಜು.