Rakesh Zhunzhunwala – ರಾಕೇಶ್ ಝಂಝನ್ ವಾಲಾ ಸ್ಟಾಕ್ ಮಂತ್ರ

# ಆತುರದಲ್ಲಿ ತೆಗೆದುಕೊಂಡ ನಿರ್ಧಾರಗಳು ಯಾವತ್ತಿಗೂ ನಷ್ಟವನ್ನೇ ಉಳಿಸುತ್ತವೆ.

# ಸ್ಟಾಕ್ ಮಾರ್ಕೆಟ್ ನಲ್ಲಿ (stock Market) ಹೂಡಿಕೆ (Investment)ಮಾಡುವ  ಮುನ್ನ ಸಾಕಷ್ಟು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

# ಸಮಂಜಸವಾದ ಮೌಲ್ಯಗಳನ್ನು ನಂಬಿ ಹೂಡಿಕೆ ಮಾಡಬೇಡಿ.

# ಸದ್ಯ ಜನಪ್ರಿಯವಾಗಿರುವ ಕಂಪನಿಗಳ (Company) ಷೇರು  (Shares)ಖರೀದಿ ಕಸರತ್ತು  ಮಾಡಬೇಡಿ.

# ಮಾರ್ಕೆಟ್ ಗೌರವಿಸಿ.. ಯಾವಾಗ ಷೇರು ಖರೀದಿ  ಮಾಡಬೇಕು.. ಯಾವಾಗ  ನಷ್ಟವನ್ನು ಅನುಭವಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಜವಾಬ್ದಾರಿಯುತವಾಗಿ ಬೆಳೆಯಬೇಕು.

# ನಷ್ಟ (Loss)ಅನುಭವಿಸಲು ಸಿದ್ಧ ಇರಬೇಕು.  ಸ್ಟಾಕ್ ಮಾರ್ಕೆಟ್ ಹೂಡಿಕೆದಾರರ ಜೀವನದಲ್ಲಿ  ನಷ್ಟ ಕೂಡ ಒಂದು ಭಾಗವೇ..

# ನಷ್ಟ ಭರಿಸುವ ಶಕ್ತಿ  ಇಲ್ಲದೇ ಸ್ಟಾಕ್ ಮಾರ್ಕೆಟ್ ನಲ್ಲಿ ಲಾಭ (Profit)ಕಾಣಲು ಸಾಧ್ಯವಿಲ್ಲ.

# ಸ್ಟಾಕ್ ಮಾರ್ಕೆಟ್ ನಲ್ಲಿ ಷೇರು  ಮಾರಾಟ ಆಗುವಾಗ ನಾವು  ಖರೀದಿ  ಮಾಡಬೇಕು. ಮಾರ್ಕೆಟ್ ನಲ್ಲಿ ಖರೀದಿ ಶುರುವಾದಾಗ ನಾವು  ಮಾರಾಟ ಮಾಡಬೇಕು. ಇದೇ ಸ್ಟಾಕ್ ಮಾರ್ಕೆಟ್ ತಂತ್ರ.

# ಪೈಪೋಟಿ ತತ್ವ ಹೊಂದಿರುವ ಮಾಲೀಕರ ಮಾಲೀಕತ್ವದ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು.

# ಮಾರ್ಕೆಟ್ ಮೇಲೆ ವ್ಯಾಮೋಹ ಇಲ್ಲದಿದ್ದರೆ ಎಂದಿಗೂ ಗೆಲುವು ಸಾಧಿಸಲು ಸಾಧ್ಯವಿಲ್ಲ.

# ದಿನದ  ವಾಣಿಜ್ಯ ಸುದ್ದಿಗಳ ಆಧಾರದ ಮೇಲೆ ನಿಮ್ಮ ಹೂಡಿಕೆ ನಿರ್ಣಾಯಗಳನ್ನು ಬದಲಾಯಿಸಿಕೊಳ್ಳಬೇಡಿ.

# ಭಯ, ಆತಂಕದಿಂದ ಷೇರು  ಮಾರಾಟ ಮಾಡುವುದು ಮಾರ್ಕೆಟ್ ನಲ್ಲಿ ಒಂದು ಕೆಟ್ಟ ಅಭ್ಯಾಸ.

ಈ  ಮಂತ್ರಗಳನ್ನು  ಚಾಚು ತಪ್ಪದೆ ಪಾಲಿಸಿದಲ್ಲಿ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು.

LEAVE A REPLY

Please enter your comment!
Please enter your name here