Chanakya mantra – ಮನೆ ಯಜಮಾನ ಹೇಗಿರಬೇಕು?

ಮನುಷ್ಯ ಹೇಗೆ ಜೀವಿಸಬೇಕು? ಹೇಗೆ ಇರಬಾರದು ಎಂಬ  ವಿಷಯಗಳನ್ನು ಚಾಣಕ್ಯ (Chanakya)ನೀತಿ ಶಾಸ್ತ್ರದಲ್ಲಿ (Neeti Shastra)ವಿವರಿಸಿದ್ದಾರೆ. ಇದೇ ವೇಳೆ ಮನೆ  ಯಜಮಾನ ಹೇಗಿರಬೇಕು ಎಂಬುದನ್ನು ವಿವಾರಿಸಿದ್ದಾರೆ.

# ಕುಟುಂಬ ಸದಸ್ಯರು ಮನೆ ಯಜಮಾನನ್ನು ನೋಡಿ ಎಲ್ಲವನ್ನು ಕಲಿಯುತ್ತಾರೆ. ಹೀಗಾಗಿ  ಮನೆ ಯಜಮಾನ ಕೆಟ್ಟ ಚಟಗಳಿಂದ (Bad Habits)ದೂರ ಇರಬೇಕು.

# ಮನೆಯ ಜವಾಬ್ದಾರಿಯೆಲ್ಲಾ ಮನೆ  ಯಜಮಾನನ  ಮೇಲಿರುವ ಕಾರಣ, ಅವರು  ಆರೋಗ್ಯದ (Health)ಕಡೆ ಹೆಚ್ಚು ಜಾಗ್ರತೆ ವಹಿಸಬೇಕು.

#ಮನೆ ಯಜಮಾನ ಆರೋಗ್ಯವಾಗಿ ಇದ್ದಲ್ಲಿ ಕುಟುಂಬದ ಆರೋಗ್ಯ ಕೂಡ ಚನ್ನಾಗಿ ಇರುತ್ತದೆ.

# ಯಾವುದೇ ವಿಷಯ ಇರಲಿ  ಕುಟುಂಬ ಸದಸ್ಯರ ಜೊತೆ ಚರ್ಚಿಸಬೇಕು. ಅವರ  ಕಷ್ಟ ಸುಖಗಳನ್ನು, ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳಬೇಕು. ಆ ಸಮಸ್ಯೆಗಳನ್ನು ಬಗ್ಗೆ ಹರಿಸಬೇಕು.

# ಸೋದರ, ಸೋದರಿಯರ (Brothers and Sisters)ಜೊತೆ ಸತ್ಸಂಬಂಧ ಮುಂದುವರೆಸಬೇಕು. ಆಸ್ತಿ ತಗಾದೆ ಅಥವಾ ಯಾವುದೋ ಒಂದು ಮಾತಿನಿಂದ ದೂರ ಆಗಬಾರದು.

#ಆಹಾರ ವ್ಯರ್ಥ (Wastage of food)ಮಾಡಬಾರದು. ಮನೆಯವರಿಗೆ ಅಗತ್ಯ ಇರುವಷ್ಟು ಅಡುಗೆ ಮಾಡಬೇಕು. ಹೆಚ್ಚು ಅಡುಗೆ ಮಾಡಿ, ಬಿಸಾಕುವಂತಾಗಬಾರದು. ನೀವು  ಹೀಗೆ  ಮಾಡಿದಲ್ಲಿ  ಮಕ್ಕಳಿಗೆ  ಅನ್ನದ ಬೆಲೆ ತಿಳಿಯುವುದಿಲ್ಲ.

# ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು. ಸಂಪಾದನೆ  ಮಾಡಿರುವ  ಹಣವನ್ನು ಜಾಣತನದಿಂದ ಖರ್ಚು  ಮಾಡಬೇಕು. ಕಡ್ಡಾಯವಾಗಿ ಉಳಿತಾಯ (Savings) ಮಾಡಬೇಕು. ದುಬಾರಿ  ಖರ್ಚು ಮಾಡಿದಲ್ಲಿ ಕುಟುಂಬ (Family)ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ.

LEAVE A REPLY

Please enter your comment!
Please enter your name here