BIG BREAKING: ಫೇಸ್​ಬುಕ್​ ಮಾತೃ ಕಂಪನಿ Metaದಿಂದ 11 ಸಾವಿರ ಉದ್ಯೋಗಿಗಳು ವಜಾ

Meta fires more than 11,000 employees
Meta fires more than 11,000 employees
ಫೇಸ್​​ಬುಕ್​ನ ಮಾತೃಸಂಸ್ಥೆ ಮೆಟಾ 11 ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಈ ಬಗ್ಗೆ ಮೆಟಾ ಕಂಪನಿ ಮಾಲೀಕ ಮಾರ್ಕ್​ ಜುಕರ್​​ಬರ್ಗ್​ ಅಧಿಕೃತ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ.
ಮೆಟಾ ಕಂಪನಿಯ ಶೇಕಡಾ 13ರಷ್ಟು ಅಂದರೆ 11 ಸಾವಿರ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮೆಟಾ ಕಂಪನಿ ಫೇಸ್​​ಬುಕ್​, ವಾಟ್ಸಾಪ್​ ಮತ್ತು ಇನ್ಸ್​ ಸ್ಟಾಗ್ರಾಂ ಸಾಮಾಜಿಕ ಜಾಲತಾಣದ ಮಾಲೀಕತ್ವ ಹೊಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ಟ್ವಿಟ್ಟರ್​ ಭಾರತದಲ್ಲಿ ತನ್ನ ಶೇಕಡಾ 90ರಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕಿತ್ತು.