ಚಂಡೀಗಡ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ಪ್ರಧಾನಿ ಘೋಷಣೆ

Bhagat Singh International Airport

ಪಂಜಾಬ್​ ಹಾಗೂ ಹರಿಯಾಣ ರಾಜ್ಯಗಳ ರಾಜಧಾನಿ ಚಂಡೀಗಢದಲ್ಲಿರುವ (Chandigarh) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಭಗತ್ ಸಿಂಗ್” (Bhagat Singh International Airport) ಹೆಸರು ಮರು ನಾಮಕರಣ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಘೋಷಣೆ ಮಾಡಿದ್ದಾರೆ.

ಇಂದು ಮನ್​ ದೇಶವನ್ನುದ್ದೇಶಿಸಿ ಮನ್​ ಕಿ ಬಾತ್​ನಲ್ಲಿ (Mann Ki Bath) ಮಾತನಾಡಿದ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ. ಪಂಜಾಬ್​ನಲ್ಲಿ ಪಕ್ಷದ ನೆಲೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಇದು ಮೊದಲ ಹೆಜ್ಜೆಯಾಗಿದೆ.

1966 ಪಂಜಾಬ್​ನಿಂದ ಹರಿಯಾಣವನ್ನು ಪ್ರತ್ಯೇಕ ರಾಜ್ಯವಾಗಿ ವಿಭಜಿಸಲಾಯಿತು. ಆದರೆ, ಚಂಡೀಗಢವನ್ನು ಎರಡೂ ರಾಜ್ಯಗಳಿಗೆ ರಾಜಧಾನಿಯನ್ನಾಗಿ ಮಾಡಿ, ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಯಿತು. ಇದನ್ನೂ ಓದಿ : ಪಠ್ಯಪುಸ್ತಕದಿಂದ ಭಗತ್ ಸಿಂಗ್ ಪಾಠ ತೆಗೆದ ರಾಜ್ಯ ಸರ್ಕಾರ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಿಡಿ

ಪಂಜಾಬ್​ನಲ್ಲಿ ಭಗತ್ ಸಿಂಗ್ (Bhagat Singh) ಹೆಸರೇಳಿ ಅಧಿಕಾರಕ್ಕೆ ಬಂದಿರುವ ಆಮ್​ ಆದ್ಮಿ ಪಕ್ಷಕ್ಕೆ (Aam Admi Party) ಕೌಂಟರ್ ಕೊಡುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ, ಪಂಜಾಬ್​ನ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಚಂಡೀಗಢದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bhagat Singh International Airport) 2011 ರ ಏಪ್ರೀಲ್ 14 ರಂದು ಕಾರ್ಯಾರಂಭ ಮಾಡಿದೆ. 2021 ರಲ್ಲಿ ಏಷ್ಯಾ ಭಾಗದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಕ್ಯಾತಿಗೆ ಒಳಗಾಗಿದೆ.

ಇದನ್ನೂ ಓದಿ : PFI ಕಾರ್ಯಕರ್ತರಿಂದ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ : ಬಂಧನ

LEAVE A REPLY

Please enter your comment!
Please enter your name here