PFI ಕಾರ್ಯಕರ್ತರಿಂದ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ : ಬಂಧನ

Pakistan Jindabad Slogan

ಮಹಾರಾಷ್ಟ್ರದ ಪುಣೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ (Pakistan Jindabad Slogan) ಎಂಬ ಘೋಷಣೆ ಕೂಗಿದ್ದ ಪಿಎಫ್​ಐ ಕಾರ್ಯಕರ್ತರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ದೇಶಾದ್ಯಂತ ಪಿಎಫ್​ಐ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿತ್ತು. ಈ ದಾಳಿಯನ್ನು ಖಂಡಿಸಿ ಪುಣೆಯಲ್ಲಿ ಶುಕ್ರವಾರ PFI ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪಿಎಫ್​ಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು.

ಮೊಹಮ್ಮದ್ ರಿಯಾಜ್ ಸಯ್ಯದ್ ಸೇರಿದಂತೆ 60-70 ಜನ ಘೋಷಣೆ ಕೂಗಿದ್ದರು. ಇವರ ಮೇಲೆ ಪುಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.

ಇಂದು, ಪುಣೆ ಪೊಲೀಸರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ (Pakistan Jindabad Slogan) ಕೂಗಿದ ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ದೇಶದಾದ್ಯಂತ 13 ರಾಜ್ಯಗಳ ಪಿಎಫ್​ಐ ಕಚೇರಿ ಮತ್ತು ನಾಯಕರ ಮನೆಗಳ ಮೇಲೆ ಏಕಕಾಲಕ್ಕೆ ಎನ್​ಐಎ ದಾಳಿ ನಡೆಸಿತ್ತು. ಈ ದಾಳಿಯ ನಂತರ 106 ಜನ ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹಲವರ ಬಂಧನಕ್ಕಾಗಿ ಪೊಲೀಸರು ಇನ್ನೂ ಕಾದು ಕುಳಿತಿದ್ದಾರೆ. ಕೇರಳದಲ್ಲಿ ಶುಕ್ರವಾರ ಪಿಎಫ್​ಐ ನಡೆಸಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.

ಇದನ್ನೂ ಓದಿ : ಉ.ಪ್ರದೇಶ ಚುನಾವಣೆ : ಪಾಕಿಸ್ತಾನ್ ಜಿಂದಾಬಾದ್ ಎಂದ 7 ಜನರ ಮೇಲೆ ಪ್ರಕರಣ ದಾಖಲು

LEAVE A REPLY

Please enter your comment!
Please enter your name here