ಆರ್​ಎಸ್​ಎಸ್​​ ಕೈಗೊಂಬೆ ಬೊಮ್ಮಾಯಿಗೆ ಈಗ ಅವಮಾನವಂತೆ – ಎಚ್​ಸಿ ಮಹಾದೇವಪ್ಪ ಕಿಡಿ

HC Mahadevappa

ಆರ್​ಎಸ್​​ಎಸ್​​ನ ಕೈಗೊಂಬೆಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಹಿಜಾಬ್, ಹಲಾಲ್​ ಮೂಲಕ ಶಾಂತಿ, ಸೌಹಾರ್ದತೆಗೆ ಧಕ್ಕೆ ತಂದಾಗ ಅವಮಾನ ಆಗಲಿಲ್ಲ. ಆದರೆ, ಜನ ಇವರಿಗೆ ಪ್ರತಿರೋಧ ತೋರಿದಾಗ ಅವಮಾನವಾಗಿದೆ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್​​ ನಾಯಕ ಹೆಚ್​ಸಿ ಮಹಾದೇವಪ್ಪನವರು (HC Mahadevappa) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಯಡಿಯೂರಪ್ಪನವರ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಏರಿದ ಬಸವರಾಜ ಬೊಮ್ಮಾಯಿಯವರು ಕ್ರಮೇಣ ಆರ್ ಎಸ್ ಎಸ್ ಕೈಗೊಂಬೆಯಾಗಿದ್ದಾರೆ. ಹಿಜಾಬ್, ಹಲಾಲ್ ನಂತಹ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ವಿರುದ್ಧವಾದ ಸಂಗತಿಗಳು ನಡೆಯುತ್ತಿದ್ದರೂ ಕೂಡಾ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವ ರೀತಿಯಲ್ಲಿ ಸುಮ್ಮನೇ ಇದ್ದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲೂ ಸಹ ಅಜ್ಞಾನವನ್ನು ಎಚ್ಚರಿಸಬೇಕಿದ್ದ ಮುಖ್ಯಮಂತ್ರಿಗಳು ಮತ್ತೆ RSS ನ ಕೈಗೊಂಬೆಯಂತೆಯೇ ವರ್ತಿಸಿದರು. ಗುತ್ತಿಗೆದಾರರೇ ಕಾಮಗಾರಿ ನಿರ್ವಹಿಸಲು ಆಗದೇ ಇರುವಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು 40% ನಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ದಾಖಲೆ ಸಮೇತ ಆರೋಪಿಸಿದರು. ಬಹಶಃ ಬೊಮ್ಮಾಯಿ ಅವರಿಗೆ ಅವಮಾನ ಆಗುವುದೇ ಆಗಿದ್ದರೆ ಈ ಎಲ್ಲಾ ಸಂದರ್ಭದಲ್ಲಿ ಆಗಬೇಕಿತ್ತು. ಇದನ್ನೂ ಓದಿ : ಗಾಂಧಿ ಕುಟುಂಬದವರು ಕಾಂಗ್ರೆಸ್ ಅಧ್ಯಕ್ಷರಾಗಲ್ಲ : ಅಶೋಕ್ ಗೆಹ್ಲೋಟ್

ಆದರೆ, ಅಭಿವೃದ್ಧಿ ಇಲ್ಲದ ಮತ್ತು ಜನಪರ ಯೋಜನೆಗಳೇ ಇಲ್ಲದ ಬಿಜೆಪಿಗರ ದುರಾಡಳಿತದಿಂದ ಬೇಸತ್ತು ನಡೆಸುತ್ತಿರುವ ಪೇಸಿಎಂ ಅಭಿಯಾನಕ್ಕೆ ಜನ ಬೆಂಬಲ ಸಿಕ್ಕ ಕೂಡಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅವಮಾನ ಪ್ರಜ್ಞೆ ಜಾಗೃತವಾಗಿರುವುದು ಹಾಸ್ಯಾಸ್ಪದ ಸಂಗತಿ.

ಸಮಾಜದ ಸಾಮರಸ್ಯ ಹಾಳು ಮಾಡುವುದರಿಂದ ಹಿಡಿದು, ಕಮಿಷನ್ ಭ್ರಷ್ಟಾಚಾರದವರೆಗಿನ ನಿಮ್ಮ ಸರ್ಕಾರದ ದುರಾಡಳಿತದಿಂದ ರಾಜ್ಯಕ್ಕೆ ಈಗಾಗಲೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ. ಈಗ ಬೊಮ್ಮಾಯಿ ಅವರು ಎದುರಿಸುತ್ತಿರುವುದು ಅವಮಾನವಲ್ಲ ಪ್ರತಿರೋಧವಾಗಿದ್ದು ಅದು ಈ ಸಂದರ್ಭದಲ್ಲಿ ಅನಿವಾರ್ಯವೂ ಆದ ಸಂಗತಿಯಾಗಿದೆ ಎಂದು ಹೆಚ್​ಸಿ ಮಹಾದೇವಪ್ಪನವರು (HC Mahadevappa) ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಾಳೆ Paycm Poster ಹಿಡಿದು ಪ್ರತಿಭಟನೆ : ಸಿದ್ದರಾಮಯ್ಯ ಘೋಷಣೆ

LEAVE A REPLY

Please enter your comment!
Please enter your name here