ನಾಳೆ Paycm Poster ಹಿಡಿದು ಪ್ರತಿಭಟನೆ : ಸಿದ್ದರಾಮಯ್ಯ ಘೋಷಣೆ

ಸಿದ್ದರಾಮಯ್ಯ

ಪೇಸಿಎಂ ಕ್ಯೂಆರ್ ​ಕೋಡ್​​ (Paycm Poster) ಭಿತ್ತಿಪತ್ರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಪೊಲೀಸರು 3 ಜನ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಮ್ಮ ಕಾರ್ಯಕರ್ತರೇನು ಕಳ್ಳತನ ಮಾಡಿದ್ದಾರಾ. ನಾಳೆ ಗುರುವಾರ ನಾವೇ ಪೋಸ್ಟರ್​ ಹಿಡಿದು ಪ್ರತಿಭಟಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದಿಂದ 40% ಕಮಿಷನ್ ಆಂದೋಲನ ನಡೆಯುತ್ತಿದೆ. ನಾನು,ಡಿಕೆಶಿ, ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿ ನಿನ್ನೆ ಬುಧವಾರ ನಮ್ಮ ಪಕ್ಷದ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಭ್ರಷ್ಟಾಚಾರ: PAYCM ಪೋಸ್ಟರ್​ ಸಂಬಂಧ ಮೂವರ ಬಂಧನ

ಬಿಜೆಪಿವರೂ ಕೂಡ ಸುಳ್ಳು ಆರೋಪ ಮಾಡಿದ್ದಾರೆ. ನಮಗೂ ಬೇಡವಾದವರು ಅಂತ ಪೊಸ್ಟರ್ ಅಂಟಿಸಿದ್ದಾರೆ ಅಲ್ವಾ..?ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ. ನಾಯ್ಡು ಅವರನ್ನು ರಾತ್ರಿ ಬಂಧನ ಮಾಡಿದ್ದಾರೆ. ಅವರೇನು ಕಳ್ಳತನ ಮಾಡಿದ್ರ.?  ನಾವು ಆಂದೋಲನ ಮಾಡುತ್ತಿದ್ದೇವೆ. ಸರ್ಕಾರದ ವಿರುದ್ಧ ಹೋರಾಟ ಮಾಡಬಾರದ..? ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಂಪಣ್ಣ ಪತ್ರ ಬರೆದು ಎಷ್ಟು ದಿನ ಆಯ್ತು. ಯಾಕೆ ಇವರು ತನಿಖೆ ಮಾಡಿಸಲಿಲ್ಲ. ಯಡಿಯೂರಪ್ಪ ಆಪ್ತನ ಮೆಲೆ ದಾಳಿಯಾಗುತ್ತಲ್ವಾ. ಅವಾಗ ದಾಖಲೆ ಸಿಕ್ಕಿತ್ತು, ತನಿಖೆ ಮಾಡಿಸಬೇಕಿತ್ತಲ್ವಾ. ಸರ್ಕಾರ ಎಲ್ಲವನ್ನೂ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ಮೋದಿ ಭಾಷಣ ಮಾಡ್ತಾರೆ, ಭ್ರಷ್ಟಾಚಾರ ಮಟ್ಟ ಹಾಕ್ತೇವೆ ಅಂತ ನಾ ಖಾವುಂಗಾ, ನಾ ಖಾನೆ ದೂಂಗಾ ಅಂತಾರೆ. ನಾಳೆ ನಾವೇ ಪೋಸ್ಟರ್ ಹಿಡಿದು ಪ್ರತಿಭಟನೆ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಧಮ್​ ಬಗ್ಗೆ ಕೇಳ್ಬೇಡಿ – ಸಿಎಂ ಬೊಮ್ಮಾಯಿ ಧಮ್​ ಬಗ್ಗೆ ಪ್ರಶ್ನಿಸಿದ ಬಿಜೆಪಿ ಶಾಸಕ ಯತ್ನಾಳ್​

LEAVE A REPLY

Please enter your comment!
Please enter your name here