‘ನನಗೆ ಯಾರು ಲಂಚ ಕೊಡಬೇಕಾಗಿಲ್ಲ’ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕ ಅಳವಡಿಕೆಗೆ ಆದೇಶ

ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನದ ಭಾಗವಾಗಿ ಎಲ್ಲಾ ಅಧಿಕಾರಿಗಳು ‘ನನಗೆ ಯಾರು ಲಂಚ ಕೊಡಬೇಕಾಗಿಲ್ಲ ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂಬ ನಾಮ ಫಲಕವನ್ನು ಕಚೇರಿಗಳಲ್ಲಿ ಅಳವಡಿಸಬೇಕೆಂದು ಸರ್ಕಾರ ಆದೇಶ ಮಾಡಿದೆ.

ಸಿಟಿಜನ್ ಎನ್​ಕ್ವೈರಿ ಕೌನ್ಸಿಲ್ ಮತ್ತು ಸಿಇಸಿ ಟ್ರಸ್ಟ್​​ ಇದೇ ಅಕ್ಟೋಬರ್ 2 ರಿಂದ 20 ರ ವರೆಗೆ ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ ನನಗೆ ಯಾರು ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ನಾಮಫಲಕವನ್ನು ಮಾಡಿಸಿದೆ.

ಈ ನಾಮಫಲಕಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿಕೊಳ್ಳಲು ಸಿಇಟಿ ಟ್ರಸ್ಟ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿನಂತಿಸಿಕೊಂಡಿತ್ತು.

ಈ ಪತ್ರಕ್ಕೆ ಅನಮತಿ ನೀಡಿರುವ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್ ಅವರು ಸಂಸ್ಥೆ ನೀಡಿದ ನಾಮಫಲಕಗಳನ್ನು ಹಾಕಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ : Paycm Poster Protest : ಕಾಂಗ್ರೆಸ್ನಿಂದ ಪೇಸಿಎಂ ಪೋಸ್ಟರ್ ಅಂಟಿಸಿ ಪ್ರತಿಭಟನೆ – ಬಂಧನ

LEAVE A REPLY

Please enter your comment!
Please enter your name here