ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ದರ ಹೆಚ್ಚಳವನ್ನು ತಡೆಹಿಡಿಯಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಮಾರ್ಚ್ 14ರಿಂದ ಜಾರಿಯಲ್ಲಿರುವ ಟೋಲ್ ದರವನ್ನೇ ವಾಹನ ಮಾಲೀಕರು ಪಾವತಿಸಬಹುದಾಗಿದೆ.
ಹೊಸ ದರ ಇವತ್ತಿನಿಂದ ಜಾರಿ ಆಗಬೇಕಿತ್ತು.
ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಮೊತ್ತ ಹೆಚ್ಚಿಸಲಾಗಿತ್ತು.
ಇವತ್ತಿನಿಂದ ಅನ್ವಯಿಸಿ ಟೋಲ್ ದರದಲ್ಲಿ ಶೇಕಡಾ 22ರಷ್ಟು ಹೆಚ್ಚಳ ಮಾಡಿ ಮಾರ್ಚ್ 27ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿತ್ತು.
ಹೊಸ ಟೋಲ್ ದರ:
ಕಾರು/ವ್ಯಾನ್/ಜೀಪ್: 165 ರೂ. ದ್ವಿಮುಖ ಸಂಚಾರ – 250 ರೂ. ಹೆಚ್ಚಳ – 30 ರೂ. ಮತ್ತು 45 ರೂ.
ಟ್ರಕ್/ ಬಸ್/ಟ್ಯಾಕ್ಸಿ – 565 ರೂ, ದ್ವಿಮುಖ ಸಂಚಾರ – 850 ರೂ., ಹೆಚ್ಚಳ – 165 ರೂ. ಮತ್ತು 160 ರೂ.
ಲಘು ವಾಹನಗಳು/ಮಿನಿಬಸ್: 270 ರೂ. , ದ್ವಿಮುಖ ಸಂಚಾರ -405 ರೂ. ಹೆಚ್ಚಳ – 50 ರೂ. ಮತ್ತು 75 ರೂ.
ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: 615 ರೂ., ದ್ವಿ ಮುಖಸಂಚಾರ – 925 ರೂ. ಹೆಚ್ಚಳ – 115 ರೂ. ಮತ್ತು 225 ರೂ.
ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ಮೂವರ್ಸ್/4-6 ಆಕ್ಸೆಲ್ ವಾಹನಗಳು: 885 ರೂ. , ದ್ವಿಮುಖ ಸಂಚಾರ – 1,330 ರೂ. ಹೆಚ್ಚಳ -165 ರೂ. ಮತ್ತು 250 ರೂ.
7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: 1,080 ರೂ., ದ್ವಿಮುಖ ಸಂಚಾರ – 1,620 ರೂ., ಹೆಚ್ಚಳ: 200 ರೂ. ಮತ್ತು 305 ರೂ.
ADVERTISEMENT
ADVERTISEMENT