ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ 21 ಚುನಾವಣಾ ಸಮಾವೇಶಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೇ 6 ಮತ್ತು 8ರಂದು ಅಂದರೆ ಮತದಾನಕ್ಕೂ ಕೆಲವೇ ದಿನ ಮೊದಲು ಮೈಸೂರು ಭಾಗದಲ್ಲಿ ಪ್ರಧಾನಿ ಮೋದಿ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿ ವಾರವೂ ಕರ್ನಾಟಕಕ್ಕೆ ಪ್ರಧಾನಿ ಮೋದಿ:
ಚುನಾವಣೆಯ ಹೊತ್ತಲ್ಲಿ ಕರ್ನಾಟಕಕ್ಕೆ ಮೋದಿಯವರು ಅತೀ ಹೆಚ್ಚು ಭೇಟಿ ಕೊಟ್ಟಿದ್ದಾರೆ. ಹಲವು ಸರ್ಕಾರಿ ಯೋಜನೆ ಉದ್ಘಾಟಿಸಿದ್ದಾರೆ.
ಕಳೆದ 4 ತಿಂಗಳಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಎಂಟು ಬಾರಿ ಭೇಟಿ ಕೊಟ್ಟಿದ್ದಾರೆ. 2014ರಲ್ಲಿ ಪ್ರಧಾನಿ ಆದ ಬಳಿಕ ಮೋದಿಯವರು ಕರ್ನಾಟಕ್ಕೆ ಅತೀ ಹೆಚ್ಚು ಭೇಟಿ ನೀಡಿರುವುದು ಇದೇ ಮೊದಲು.
ಈ ತಿಂಗಳು ಅಂದರೆ ಏಪ್ರಿಲ್ 9ರಂದು ಹುಲಿ ಯೋಜನೆಯ ಸ್ವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುತ್ತಿದ್ದು, ಬಂಡೀಪುರಕ್ಕೆ ಭೇಟಿ ನೀಡಲಿದ್ದಾರೆ.
ಮಾರ್ಚ್ 25: ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ
ಮಾರ್ಚ್ 12: ಮಂಡ್ಯ, ಧಾರವಾಡ
ಫೆಬ್ರವರಿ 27: ಶಿವಮೊಗ್ಗ, ಬೆಳಗಾವಿ
ಫೆಬ್ರವರಿ 12: ಬೆಂಗಳೂರು
ಫೆಬ್ರವರಿ 06: ಬೆಂಗಳೂರು, ತುಮಕೂರು
ಜನವರಿ 19: ಯಾದಗಿರಿ, ಕಲಬುರಗಿ
ಜನವರಿ 12: ಹುಬ್ಬಳ್ಳಿ
ತಮ್ಮ ಎಂಟು ಬಾರಿ ಭೇಟಿಯ ವೇಳೆ ಪ್ರಧಾನಿ ಮೋದಿಯವರು ಬೆಂಗಳೂರಲ್ಲಿ ಎರಡು ಬಾರಿ, ಬೆಳಗಾವಿ, ಹುಬ್ಬಳ್ಳಿ, ಮಂಡ್ಯ, ದಾವಣಗೆರೆಯಲ್ಲಿ ರೋಡ್ ಶೋ ಕೈಗೊಂಡಿದ್ದರು.
8 ಬಾರಿ ಭೇಟಿ ವೇಳೆ ಬೆಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದಾರೆ.
29 ತಿಂಗಳು ಬಂದಿರಲಿಲ್ಲ ಪ್ರಧಾನಿ ಮೋದಿ:
2020ರ ಜನವರಿಯಿಂದ 2022ರ ಜೂನ್ವರೆಗೆ ಪ್ರಧಾನಿ ಮೋದಿಯವರು 29 ತಿಂಗಳು ಅಂದರೆ ಎರಡೂವರೆ ವರ್ಷ ಕರ್ನಾಟಕಕ್ಕೆ ಭೇಟಿ ಕೊಟ್ಟಿರಲಿಲ್ಲ.
ಪ್ರವಾಹದ ವೇಳೆಯೂ ಬಾರದ ಪ್ರಧಾನಿ ಮೋದಿ:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಾದ ಪ್ರವಾಹ ಮತ್ತು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಆದ ಪ್ರವಾಹದ ವೇಳೆ ಕರ್ನಾಟಕಕ್ಕೆ ಮೋದಿ ಭೇಟಿ ಕೊಟ್ಟಿರಲಿಲ್ಲ, ವೈಮಾನಿಕ ಸಮೀಕ್ಷೆಯನ್ನೂ ಕೈಗೊಂಡಿರಲಿಲ್ಲ.
ADVERTISEMENT