ಗೋವಾದಿಂದ ವಾಪಸ್​ ಆಗ್ತಿದ್ದ ಬೆಂಗಳೂರು ಮೂಲದ ಮೂವರು ಅಪಘಾತದಲ್ಲಿ ಸಾವು

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬರುವ ಭರಮಸಾಗರ ಠಾಣಾ ವ್ಯಾಪ್ತಿಯ ವಿಜಯಪುರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ.

ಮೃತರು ಬೆಂಗಳೂರು ಮೂಲದವರು.

ಇವರು ಪ್ರಯಾಣಿಸುತ್ತಿದ್ದ ಎಸ್​ಯುವಿ ವಾಹನ ಟ್ರಕ್​ಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನ ಇವರು ಗೋವಾದಿಂದ ಬೆಂಗಳೂರಿಗೆ ವಾಪಸ್​ ಅಗುತ್ತಿದ್ದರು.

ಮೃತರನ್ನು ಝಾಕೀರ್​ ಅಹ್ಮದ್​ (60), ತಬ್ಸಂ (28), ಹಯಾತ್​ ಫಾತಿಮಾ (3 ತಿಂಗಳ ಮಗು) ಎಂದು ಗುರುತಿಸಲಾಗಿದೆ.

ನಜಿಯಾ (22), ಇಮ್ರಾನ್​ ಖಾನ್​ (32) ಶೋಯಬ್​ ಅಹ್ಮದ್​ (30), ತಬ್ರೇಜ್​ ಅಹ್ಮದ್​ (27), ಸಬಾ (26) ಗಾಯಗೊಂಡವರು.