ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡದವರು ಮನೆ ಬಾಗಿಲಿಗೆ ಬಂದರೆ ಅವರು ಮೂರು ಬಿಟ್ಟವರು ಎಂದು ದಾವಣಗೆರೆ ಜಿಲ್ಲೆ ಕಾಂಗ್ರೆಸ್ ಶಾಸಕ ಅಸಮಾಧಾನ ಹೊರಹಾಕಿದ್ದಾರೆ.
ನನಗೆ ಗೊತ್ತಿಲ್ಲದೇ ನನ್ನ ಮನೆ ಬಂದಿರ್ತಾರೆ, ಅಲ್ಲಿ ಹಾಕಿರ್ತಾರೆ. ಅವರು ಮೂರನ್ನೂ ಬಿಟ್ಟವರು ನಾನೇನು ಮಾಡಕ್ಕಾಗುತ್ತೆ. ಅವರು ಮೂರನ್ನೂ ಬಿಟ್ಟಿದ್ದಾರೆ, ಈಗ್ಲೂ ಹೇಳ್ತೀನಿ, ನನ್ನ ಮನೆ ಬಾಗಿಲಿಗೆ ಏನಾದ್ರೂ ಬಂದ್ರೆ ಅವರು ಮೂರನ್ನೂ ಬಿಟ್ಟಿದ್ದಾರೆ.
ನಮಗೆ ದುಡಿಯದೇ ನಮ್ಮ ಜೊತೆಗೆ ಇರದೇ ನಮ್ಮ ಜೊತೆಗಿಲ್ಲದೇ ಮೋಸ ಮಾಡಿ ನಮ್ಮ ಮನೆ ಬಾಗಿಲಿಗೆ ಬಂದವರಿಗೆ ಹೇಳ್ತಿದ್ದೀನಿ, ಅವರನ್ನು ದೇವರು ನೋಡಿಕೊಳ್ತಾನೆ, ನಾನು ದೇವರನ್ನು ಬಹಳ ನಂಬ್ತೀನಿ. ಅದರೆಲ್ಲೆಲ್ಲ ರಾಜಿ ಇಲ್ಲ. ಅಧಿಕಾರ ಇಲ್ಲದೇ ನಿಮ್ಮ ಜೊತೆ ನಾಲ್ಕು ವರ್ಷ ಇದ್ದೀನಿ, ಪಂಚಾಯತ್ ಚುನಾವಣೆ ಮಾಡಿದ್ದೀನಿ. ಕಷ್ಟ ಸಂದರ್ಭ ಬಂದಾಗ ಕೆಲಸನೂ ಮಾಡಿದ್ದೀನಿ