ಬೆಂಗಳೂರಲ್ಲಿ ವಿದೇಶಿ ಯೂಟ್ಯೂಬರ್​ ಮೇಲೆ ಹಲ್ಲೆ – ನವಾಬ್​ ಎಂಬಾತನ ಮೇಲೆ ಎಫ್​ಐಆರ್​

ಬೆಂಗಳೂರಿನ ಚಿಕ್ಕಪೇಟೆ ಸಂಡೇ ಬಜಾರ್​ನಲ್ಲಿ ವೀಡಿಯೋ ರೆಕಾರ್ಡಿಂಗ್​ ಮಾಡ್ತಿದ್ದ ಡಚ್​ ಮೂಲದ ಯೂಟ್ಯೂಬರ್​ ಮೇಲೆ ಹಲ್ಲೆ ಮಾಡಿದ ಪ್ರಕರಣದಡಿ ನವಾಬ್​ ಹಯಾತ್​ ಶರೀಫ್​ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ಚಿಕ್ಕಪೇಟೆಯ ಬೀದಿಯಲ್ಲಿ ವೀಡಿಯೋ ರೆಕಾರ್ಡಿಂಗ್​ ಮಾಡ್ತಿದ್ದ ಡಚ್​ ದೇಶದ ಪೆಡ್ರೋ ಮೋಟಾ ಅವರನ್ನು ಅಡ್ಡಹಾಕಿ ಮೇಲೆ ನವಾಬ್​ ಹಲ್ಲೆಗೆ ಯತ್ನಿಸಿದ್ದ. ಜೊತೆಗೆ ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿದ್ದ.

ಈತನ ಮೇಲೆ ಕರ್ನಾಟಕ ಪೊಲೀಸ್​ ಕಾಯ್ದೆಯ ಕಲಂ 92ರ (ಬೀದಿ ಗಲಾಟೆ ಮತ್ತು ರಂಪಾಟಕ್ಕೆ ಸಂಬಂಧಿಸಿದಂತೆ) ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ. 

ನವಾಬ್​ಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿದೇಶಿ ಪ್ರವಾಸಿಗರ ಜೊತೆಗೆ ಈ ರೀತಿ ವರ್ತಿಸಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಇದು ಹಳೆಯ ವೀಡಿಯೋ:

ಇದು ಹಳೆಯ ವೀಡಿಯೋ, ಈಗ ಮುನ್ನೆಲೆಗೆ ಬಂದಿದೆ ಎಂದು ಬೆಂಗಳೂರು ಪೊಲೀಸ್​ ಆಯುಕ್ತ ಬಿ ದಯಾನಂದ ಅವರು ಹೇಳಿದ್ದಾರೆ.  ಕಿರುಕುಳ ಕೊಟ್ಟ ವ್ಯಕ್ತಿಯನ್ನು ಗುರುತಿಸಲಾಗಿದೆ ಮತ್ತು ಕ್ರಮ ಜರುಗಿಸಲಾಗಿದೆ.

ನಮ್ಮ ಬೆಂಗಳೂರಲ್ಲಿ ಯಾರ ವಿರುದ್ಧವೂ ಇಂತಹ ದೌರ್ಜನ್ಯಕ್ಕೆ ಅವಕಾಶ ಇಲ್ಲ ಎಂದು ಆಯುಕ್ತರು ಹೇಳಿದ್ದಾರೆ.