ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ‘ಕೂರ್ಗ್ ಲೇಡಿ’

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಏನೇ ಮಾಡಿದರೂ ಸೆನ್ಸೇಷನ್​ ಸೃಷ್ಟಿ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಫೇಮಸ್​ ಆಗಿದ್ದಾರೆ. ಕನ್ನಡ ಚಿತ್ರರಂಗ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ ನಂತರ ಬಿಟೌನ್‌ನಲ್ಲಿ ಶ್ರೀವಲ್ಲಿ ಮಿಂಚುತ್ತಿದ್ದು, ಸದ್ಯ ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ನಟನೆಯ `ಗುಡ್ ಬೈ’ ಚಿತ್ರದ ಮೂಲಕ ಬಿಟೌನ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದ್ದಾರೆ.

ಇತ್ತ, ‘ಗುಡ್​ಬೈ’ ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ಕೂರ್ಗ್ ಲೇಡಿ ಸದ್ಯ ರಜೆಯ ಮಜಾ ಸವಿದು ಹಿಂದಿರುಗಿದ್ದು, ಮಾಲ್ಡೀವ್ಸ್​ನ ಕಡಲ ತೀರದಲ್ಲಿ ಬಿಂದಾಸ್​ ಆಗಿ ಪೋಸ್​ ನೀಡಿದ್ದಾರೆ. ಆ ಎಲ್ಲ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವುಗಳನ್ನು ನೋಡಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾರ ಬೋಲ್ಡ್‌ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.
ಹೌದು ಟ್ರಾವೆಲ್ ಮ್ಯಾಗಜೀನ್ ಫೋಟೋಶೂಟ್‌ನಲ್ಲಿ ರಶ್ಮಿಕಾ ತಮ್ಮ ಮೈಮಾಟ ತೋರಿಸಿದ್ದು, ಮೈ ಚಳಿ ಬಿಟ್ಟು ಬಿಕಿನಿ ಅವತಾರದಲ್ಲಿ ತಮ್ಮ ಪರ್ಫೇಕ್ಟ್‌ ಫಿಗರ್‌ ತೋರಿಸಿದ್ದಾರೆ.

ಫ್ಯಾಷನ್ ಡಿಸೈನರ್ ಅನೈತಾ ಶ್ರಾಫ್ ಅಡಾಜಾನಿಯಾ ವಿನ್ಯಾಸ ಮಾಡಿರುವ ಬಿಕಿನಿ ಉಡುಗೆಯಲ್ಲಿ ಹಾಟ್ ಲುಕ್ ನೀಡಿದ್ದು, ಟ್ರಾವೆಲ್ + ಲೀಸರ್ ಇಂಡಿಯಾ ಮ್ಯಾಗಜೀನ್‌ಗಾಗಿ ರಶ್ಮಿಕಾ ಈ ಫೋಟೋಶೂಟ್‌ ಮಾಡಿದ್ದಾರೆ.

ಅಬುಧಾಬಿಯ ಬೀಚ್‌ನಲ್ಲಿ ಗೋಲ್ಡ್ ವುಮೆನ್ ಆಗಿ ಮಿರ ಮಿರ ಮಿಂಚುತ್ತಿದ್ದು, ಗೋಥಿಕ್ ಕಪ್ಪು ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫುಲ್‌ ಫಿದಾ ಆಗಿದ್ದಾರೆ.