ಕಾಂಗ್ರೆಸ್​​ಗಿಂತಲೂ BJPಗೆ ಅಧಿಕ ಒಕ್ಕಲಿಗ ಮತಗಳು – ಫಲಿತಾಂಶ ಬಳಿಕದ ಲೆಕ್ಕಾಚಾರ ಬಹಿರಂಗ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳು ಕಾಂಗ್ರೆಸ್​​ಗಿಂತ ಹೆಚ್ಚು ಬಿಜೆಪಿಗೆ ಹೋಗಿವೆ ಎಂದು ಆಕ್ಸಿಸ್​ ಮೈ ಇಂಡಿಯಾ ತನ್ನ ಚುನಾವಣೋತ್ತರ ಮತ ಅಂದಾಜಿನಲ್ಲಿ ಹೇಳಿದೆ.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಆಕ್ಸಿಸ್​ ಮೈ ಇಂಡಿಯಾ ಯಾವ ಸಮುದಾಯದ ಮತಗಳು ಯಾವ ಪಕ್ಷಕ್ಕೆ ಅಧಿಕ ಪ್ರಮಾಣದಲ್ಲಿ ಹೋಗಿದೆ ಎಂಬ ಅಂದಾಜನ್ನು ಪ್ರಕಟಿಸಿದೆ.

ಈ ಅಂದಾಜಿನ ಪ್ರಕಾರ ಒಕ್ಕಲಿಗ ಸಮುದಾಯದ ಮತಗಳ ಪೈಕಿ ಶೇಕಡಾ 26ರಷ್ಟು ಮತಗಳು ಬಿಜೆಪಿ ಪಾಲಾಗಿವೆ. ಆದರೆ ಶೇಕಡಾ 25ರಷ್ಟು ಮತಗಳು ಕಾಂಗ್ರೆಸ್​ ಪಾಲಾಗಿವೆ.

ಶೇಕಡಾ 46ರಷ್ಟು ಒಕ್ಕಲಿಗ ಮತಗಳು ಜೆಡಿಎಸ್​ ಬಳಿಯೇ ಉಳಿದುಕೊಂಡಿದೆ ಎಂದು ಆಕ್ಸಿಸ್​ ಮೈ ಇಂಡಿಯಾ ಸಮೀಕ್ಷೆ ಅಂದಾಜಿಸಿದೆ.

ಈ ಜಾತಿ ಮತಗಳ ವರ್ಗಾವಣೆ ಲೆಕ್ಕಾಚಾರ ನೋಡಿದ್ರೆ ಒಕ್ಕಲಿಗ ಮತ ಹೆಚ್ಚಿರುವ ಹಳೆ ಮೈಸೂರು ಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಕಾರಣದಿಂದ ಹೆಚ್ಚಿನ ಒಕ್ಕಲಿಗ ಮತ ಸಿಕ್ಕಿದೆ ಎಂಬ ವಾದಕ್ಕೆ ಅಂತಿಮ ವಿರಾಮ ಬೀಳಲಿದೆ.