ಚಿತ್ತಾರ ಕಲಾ ಶಾಲೆ . ಅಹಿಂಸಾ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ನವಿಲೂರಿನಲ್ಲಿ ಕಳೆದ ಏಪ್ರಿಲ್ 14 ರಿಂದ ಏಪ್ರಿಲ್ 24 ರ ವರೆಗೆ ನಡೆದ ಪ್ರಕೃತಿಯೊಂದಿಗೆ ನಡೆದ ಚಿತ್ತಾರ ಕಲಾ ಹೆಜ್ಜೆ – 14 ಮಕ್ಕಳ ಬೇಸಿಗೆ ಶಿಬಿರವು ತುಂಬಾ ಯಶಸ್ವಿಯಾಗಿ ನಡೆದು ಸುಮಾರು 150 ಮಕ್ಕಳು ಪಾಲ್ಗೊಂಡು ಪ್ರಕೃತಿಯೊಂದಿಗೆ ಸಂಭ್ರಮಿಸಿದರು.
ಶಿಬಿರದ ಕಾರ್ಯಕ್ರಮಗಳಲ್ಲಿ ಒಂದಾದ ಮಕ್ಕಳೇ ಆಹಾರ. ತಯಾರಿಸಿ “ಆಹಾರ ಉತ್ಸವ” ನಡೆಸಿ ಮಾರಾಟ ಮಾಡಿದ ಒಟ್ಟು ಮೊತ್ತವನ್ನು ಬಡ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ಸಹಾಯ ಮಾಡುವುದು ಎಂದು ಮಕ್ಕಳ ಪೋಷಕರ ತೀರ್ಮಾನದಂತೆ ಈ ಮೊತ್ತವನ್ನು ಈ ದಿನ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ದೊನ್ನಡ್ಕ ಎಂಬಲ್ಲಿರುವ ದಿವಂಗತ ಸುಧಾಕರ ನಾಯಕ್ ರವರ ಇಬ್ಬರು ಹೆಣ್ಣು ಮಕ್ಕಳಿಗೆ ನೀಡಲಾಯಿತು.
ಪ್ರಸ್ತುತ ಈ ಕುಟುಂಬವು ಬಡತನ ರೇಖೆಗಿಂತ ಕೆಳಗಿನವರಾಗಿದ್ದು. ತಮ್ಮ ಜೀವನ ನಿರ್ವಹಣೆ ಹಾಗೂ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುವಲ್ಲಿ ಈ ಮೊತ್ತವು ಸಹಕಾರಿಯಾಗಿದ್ದು ಶಿಭಿರದ ಎಲ್ಲರಿಗೂ ತುಂಬಾ ಖುಷಿಯಾಗಿ ಇರುತ್ತದೆ.
ಶ್ರೀಮತಿ ಲಕ್ಷ್ಮಿಯವರು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದು ಸುಮಾರು 12 ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದು, ಮಕ್ಕಳ ವಿದ್ಯಾಭ್ಯಾಸದ ಚಿಂತೆಯಲ್ಲಿರುವಾಗ ಕಲಾ ಹೆಜ್ಜೆಯ ತಂಡ ಉತ್ತಮ ನಿರ್ಧಾರ ತೆಗೆದು ಕೊಂಡಿರುವುದು ಅಭಿನಂದನೀಯವಾಗಿರುತ್ತದೆ.
ಈ ದಿನ ಸಂಜೆ 6.30 ಕ್ಕೆ ಸ್ಥಳೀಯರಾದ ಶ್ರೀಮತಿ ಪುಷ್ಪ “ಧರ್ಮಶ್ರೀ” ದೋನ್ನಡ್ಕ ಕೆರ್ವಾಸೆ ಇವರ ಸಹಕಾರದೊಂದಿಗೆ ಕಾರ್ಕಳ ಚಿತ್ತಾರ ಕಲಾ ಶಾಲೆಯ ಆಡಳಿತ ನಿರ್ದೇಶಕರಾದ ಶ್ರೀ ಸುಜೀಂದ್ರ ಕಾರ್ಲ ತಮ್ಮ ತಂಡದೊಂದಿಗೆ ಹಾಗೂ ಅಹಿಂಸಾ ಚಾರಿಟೇಬಲ್ ಟ್ರಸ್ಟ್ (ರಿ) ಮಾರ್ನಾಡು ಇದರ ಆಡಳಿತ ನಿರ್ದೇಶಕರಾದ ಕೆ.ವರ್ಧಮಾನ ಜೈನ್ ರವರೊಂದಿಗೆ ಕಾರ್ಕಳ ಚಿತ್ತಾರ ಕಲಾ ಹೆಜ್ಜೆಯ ಪುಟಾಣಿಗಳು ಶ್ರಮವಹಿಸಿ ಪೋಷಕರ ಸಹಕಾರದೊಂದಿಗೆ ನೀಡಿದ ಮೊತ್ತ ಸುಮಾರು 40,000.00 (ನಲುವತ್ತು ಸಾವಿರ)ವನ್ನ ಶ್ರೀಮತಿ ಲಕ್ಷಿಯವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಚಿತ್ತಾರ ತಂಡದ ಸದಸ್ಯರಾದ ಶ್ರೀ ಪೃತ್ಬೇಶ್, ಶ್ರೀ ಯತೀಶ್. ಶ್ರೀಮತಿ ಕಲಾ ಆಚಾರ್ಯ ಶ್ರೀ ನಿಶಾಂತ್ ಅಂಚನ್ ಶ್ರೀಮತಿ ರಾಜಶ್ರೀ ಯವರು ಉಪಸ್ಥಿತರಿದ್ದರು. ಈ ಮೊತ್ತವು ಶ್ರೀಮತಿ ಲಕ್ಷ್ಮಿಯವರ ಇಬ್ಬರು ಮಕ್ಕಳಾದ ಕುಮಾರಿ ರಕ್ಷಿತಾ 10 ನೆ ತರಗತಿ ಮತ್ತು ಕುಮಾರಿ ರಕ್ಷಾ 9 ನೆ ತರಗತಿ ಇವರ ವಿಧ್ಯಾಭ್ಯಾಸಕ್ಕೆ ಶಿಭಿರದ ಚಿಣ್ಣರ ಕೊಡುಗೆಯಾಗುತ್ತದೆ.
ADVERTISEMENT
ADVERTISEMENT