ಮುಂಬೈ (Mumbai)-ಅಹಮದಾಬಾದ್ (Ahemadabad) ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿಗೆ ಜಾನುವಾರು ಅಡ್ಡಬಂದ ಕಾರಣ ರೈಲಿನ ಇಂಜಿನ್ ಮುಂಭಾಗಕ್ಕೆ ಹಾನಿ ಆಗಿದೆ.
ಬೆಳಗ್ಗೆ 11 ಗಂಟೆ 18 ನಿಮಿಷದ ವೇಳೆಗೆ ಗುಜರಾತ್ನ ವತಾವ್ನಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ವಂದೇ ಭಾರತ್ ರೈಲಿನ ಮುಂಭಾಗದ ಇಂಜಿನ್ನ ಕವಚಕ್ಕೆ ಹಾನಿ ಆಗಿದೆ.
ಅಕ್ಟೊಬರ್ 1ರಿಂದ ಮುಂಬೈ-ಗಾಂಧಿನಗರ ಮತ್ತು ಗಾಂಧಿನಗರ ಮತ್ತು ಮುಂಬೈ ನಡುವೆ ವಂದೇ ಭಾರತ್ ರೈಲುಗಳ ಓಡಾಟ ಆರಂಭ ಆಗಿದೆ.