ಡಿಕೆ ಸಹೋದರರಿಗೆ ವಿಚಾರಣೆಗೆ ಬರಹೇಳಿ EDಯಿಂದ ನೋಟಿಸ್​

ನ್ಯಾಷನಲ್​ ಹೆರಾಲ್ಡ್ ​ಹಗರಣ (National Herald Scam) ದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ (KPCC President D K Shivakumar)​ ಮತ್ತು ಅವರ ಸಹೋದರ, ಸಂಸದ ಡಿ ಕೆ ಸುರೇಶ್ ( MP D K Suresh)​ ಅವರಿಗೆ ನೋಟಿಸ್​ ಜಾರಿ ಮಾಡಿದೆ.
ತೆಲಂಗಾಣ ಕಾಂಗ್ರೆಸ್ (Telagana Congress)​ ಘಟಕದ ಕಾರ್ಯಾಧ್ಯಕ್ಷರಾದ ಜೆ ಗೀತಾ ರೆಡ್ಡಿ (J Geetha Reddy) ಅವರಿಗೂ ವಿಚಾರಣೆಗೆ ಬರುವಂತೆ ಈಡಿ ನೋಟಿಸ್​ ನೀಡಿದೆ.
ಸೆಪ್ಟೆಂಬರ್​ 30ರಿಂದ ಡಿ ಕೆ ಶಿವಕುಮಾರ್​ ಮತ್ತು ಡಿ ಕೆ ಸುರೇಶ್​ ಇಬ್ಬರೂ ಭಾರತ ಒಗ್ಗೂಡಿಸಿ ಪಾದಯಾತ್ರೆಯಲ್ಲಿ ನಿರತರಾಗಿದ್ದಾರೆ. ಪಾದಯಾತ್ರೆಯ ನಡುವೆಯೇ ಇವರಿಬ್ಬರೂ ಈಡಿ (ED) ಮುಂದೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ನಾಳೆ ಅಂದರೆ ಅಕ್ಟೋಬರ್ 7 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ED) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ ಕೆ ಸುರೇಶ್ ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಿದೆ.

ಈ ಮೊದಲು ದಿನಾಂಕ 23-09-2022 ರಂದು ಇವರಿಬ್ಬರಿಗೂ ಅಕ್ಟೋಬರ್ 7 ರಂದು ವಿಚಾರಣೆಗೆ ಬರುವಂತೆ ಇ ಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡುವಂತೆ ಶಿವಕುಮಾರ್ ಹಾಗೂ ಸುರೇಶ್ ಅವರು ಪತ್ರ ಬರೆದು ಕೋರಿದ್ದರು.

ಆದರೆ ಅದಕ್ಕೆ ನಿರಾಕರಿಸಿರುವ ಇ ಡಿ 7-10-2022 ರಂದು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ದಿನಾಂಕ 05-10-2022 ರಂದು ಮತ್ತೊಂದು ನೋಟಿಸ್ ಜಾರಿ ಮಾಡಿದೆ.

ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಡಿ ಕೆ ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.