ಅಂಬಾನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದು ಇವನೇ..!

Mukesh Ambani Family Photo
ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಆಗಿರುವ ಮುಖೇಶ್​ ಅಂಬಾನಿ (Mukesh Ambani), ಅವರ ಪತ್ನಿ ನೀತಾ ಅಂಬಾನಿ (Nita Ambani), ಮಕ್ಕಳಾದ ಆಕಾಶ್​ ಅಂಬಾನಿ (Akash Ambani), ಅನಂತ್​ ಅಂಬಾನಿ (Anant Ambani)ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಮಧ್ಯಾಹ್ನ 12.45 ಮತ್ತು ಸಂಜೆ 5.40ಕ್ಕೆ ರಿಯಲನ್ಸ್​ ಫೌಂಡೇಷನ್​ ಆಸ್ಪತ್ರೆ (Reliance Foundation Hospital)ಗೆ ಕರೆ ಮಾಡಿದ್ದ ಆರೋಪಿ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿಯೂ ಮತ್ತು ಮುಖೇಶ್​ ಅಂಬಾನಿ, ನೀತಾ ಅಂಬಾನಿ, ಆಕಾಶ್​ ಅಂಬಾನಿ ಮತ್ತು ಅನಂತ್​ ಅಂಬಾನಿಯ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ.
ಈ ಸಂಬಂಧ ಮುಂಬೈನಲ್ಲಿ (Mumbai) ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಿಹಾರ (Bihar) ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ.
ಅಂಬಾನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಆರೋಪಿ
ಅಂಬಾನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಆರೋಪಿ
ಬಂಧಿತ ಆರೋಪಿ ಬಿಹಾರ ರಾಜ್ಯದ ದರ್ಭಾಂಗ ಜಿಲ್ಲೆಯನವಾಗಿದ್ದು, ಆತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆದುಕೊಂಡು ಬರುತ್ತಿದ್ದಾರೆ.

LEAVE A REPLY

Please enter your comment!
Please enter your name here