ADVERTISEMENT
ಭಾರತ ಮೂಲದ ಔಷಧ ಕಂಪನಿ ತಯಾರಿಸಿದ್ದ ಮಕ್ಕಳಿಗೆ ನೀಡಲಾಗುವ ನಾಲ್ಕು ಸಿರಪ್ (Syrup)ಗಳ ಸೇವನೆಯಿಂದ ಗ್ಯಾಂಬಿಯಾ ದೇಶದಲ್ಲಿ 62 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ.
ಸಿರಪ್ ಸೇವಿಸಿದ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ಸಂದೇಶ ರವಾನಿಸಿದ್ದು, ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶಕರು (DCGI) ತನಿಖೆಗೆ ಆದೇಶ ನೀಡಿದ್ದಾರೆ.
ಹರಿಯಾಣ ರಾಜ್ಯದ ಮೇಡನ್ ಫಾರ್ಮೆಟಿಕಲ್ಸ್ (Maiden Pharmaceuticals) ಕಂಪನಿ ಕಫ, ಜ್ವರ, ಶೀತಕ್ಕೆ ಸಂಬಂಧಿಸಿದ ನಾಲ್ಕು ಸಿರಪ್ಗಳನ್ನು ಗ್ಯಾಂಬಿಯಾಕ್ಕೆ ರಫ್ತು ಮಾಡಿತ್ತು.
Promethazine Oral Solution, Kofexmalin Baby Cough Syrup, Makoff Baby Cough Syrup and Magrip N Cold Syrup ನಾಲ್ಕು ಸಿರಪ್ಗಳನ್ನು ಜಾಂಬಿಯಾ ದೇಶಕ್ಕೆ ಕಂಪನಿ ಮಾರಾಟ ಮಾಡಿತ್ತು.
ಈ ಸಿರಪ್ಗಳಲ್ಲಿ Diethylene Glycol ಮತ್ತು Ethylene Glycol ಪ್ರಮಾಣ ನಿಗದಿಗಿಂತ ಹೆಚ್ಚಿದೆ ಎನ್ನುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
ಈಗಾಗಲೇ ಈ ನಾಲ್ಕು ಸಿರಪ್ಗಳನ್ನು ಗ್ಯಾಂಬಿಯಾ ಮಾರುಕಟ್ಟೆಗೆ ಬಿಡಲಾಗಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ADVERTISEMENT