ಬುಡಕಟ್ಟು ಮಹಿಳೆಗೆ ಚಿತ್ರಹಿಂಸೆ : ಬಿಜೆಪಿ ನಾಯಕಿ ಸೀಮಾ ಪಾತ್ರ ಬಂಧನ

Seema Patra

ತನ್ನ ಮನೆಯಲ್ಲಿ ಸಹಾಯಕಿಯಾಗಿದ್ದ 29 ವರ್ಷದ ಬುಡಕಟ್ಟು ಮಹಿಳೆ ಸುನೀತಾಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ, ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿ ಸೀಮಾ ಪಾತ್ರಾ (Seema Patra) ಅವರನ್ನು ಜಾರ್ಖಂಡ್ ಪೊಲೀಸರು  ಇಂದು ಬುಧವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರಿ ನೌಕರ ನೀಡಿದ ಸುಳಿವಿನ ಮೇರೆಗೆ ರಾಂಚಿ ಪೊಲೀಸರು ಕಳೆದ ವಾರ ಪತ್ರಾ ಅವರ ನಿವಾಸದಿಂದ ಮಹಿಳೆಯನ್ನು ರಕ್ಷಿಸಿದ್ದರು ಮತ್ತು ಮಂಗಳವಾರ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪತ್ರಾ (Seema Patra) ಅವರು ರಾಂಚಿಯ ಐಷಾರಾಮಿ ಅಶೋಕ್ ನಗರ ಪ್ರದೇಶದ ತಮ್ಮ ನಿವಾಸದಲ್ಲಿ ಹಲವಾರು ವರ್ಷಗಳಿಂದ ಮಹಿಳೆಯನ್ನು ಬಂಧಿಯಾಗಿಟ್ಟುಕೊಂಡಿದ್ದರು.

ಇದನ್ನೂ ಓದಿ : ಬುಡಕಟ್ಟು ಮಹಿಳೆ ನಗ್ನಗೊಳಿಸಿ ಹಲ್ಲೆ ನಡೆಸಿದ ಪ್ರಕರಣ : 9 ಜನರ ಬಂಧನ

ಪತ್ರಾ ಅವರ ಬಂಧಿಸಬೇಕು ಎಂದು ಒತ್ತಾಯಿಸಿದ್ದ ಮಹಿಳೆ ಸುನೀತಾ, ತಾನು ಅನುಭವಿಸಿದ ಕಷ್ಟವನ್ನು ವಿವರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪತ್ರಾ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಅಮಾನತುಗೊಂಡಿರುವ ಬಿಜೆಪಿ ನಾಯಕಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯಪಾಲ ರಮೇಶ್ ಬೈಸ್ ಅವರು ಮಂಗಳವಾರ ಡಿಜಿಪಿ ನೀರಜ್ ಸಿನ್ಹಾ ಅವರನ್ನು ಕೇಳಿದ್ದರು.

ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ವಿವಿಧ ಬುಡಕಟ್ಟು ಸಂಘಟನೆಗಳ ಸದಸ್ಯರು ಮಂಗಳವಾರ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ‘ದ್ರೌಪದಿ ಮುರ್ಮು’ಗೆ ಬಿಎಸ್​ಪಿ ಬೆಂಬಲ

LEAVE A REPLY

Please enter your comment!
Please enter your name here