PFIನಿಂದ ಬೆದರಿಕೆ – 5 ಜನ RSS ನಾಯಕರಿಗೆ Y ಭದ್ರತೆ

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (PFI) ಕೇರಳದ ಐವರು ಆರ್‌ಎಸ್‌ಎಸ್ (RSS) ನಾಯಕರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರಿಗೆ Y ವರ್ಗದ ಭದ್ರತೆಯನ್ನು ನೀಡಿದೆ.

ಇತ್ತೀಚೆಗೆ ಪಿಎಫ್‌ಐ ಕಾರ್ಯಕರ್ತರ ಮನೆ, ಕಚೇರಿ ಮೇಲೆ ಎನ್‌ಐಎ (NIA) ನಡೆಸಿತ್ತು. ಈ ಸಮಯದಲ್ಲಿ ಕೇರಳದ ಪಿಎಫ್‌ಐ ಸದಸ್ಯ ಮೊಹಮ್ಮದ್ ಬಶೀರ್ ಮನೆ ಮೇಲೂ ದಾಳಿ ನಡೆಸಿತ್ತು. ಈ ವೇಳೆ ಬಶೀರ್ ಮನೆಯಿಂದ ಐವರು ಆರ್‌ಎಸ್‌ಎಸ್ ನಾಯಕರ ಹೆಸರುಗಳ ಪಟ್ಟಿಯು ಪಿಎಫ್‌ಐ ರಾಡಾರ್‌ನಲ್ಲಿ ಪತ್ತೆ ಆಗಿತ್ತು.

ಈ ಹಿನ್ನೆಲೆಯಲ್ಲಿ ಕೇರಳದ ಆರ್‌ಎಸ್‌ಎಸ್ ನಾಯಕರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್)ಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಶನಿವಾರ ಐವರು ಆರ್‌ಎಸ್‌ಎಸ್ ನಾಯಕರಿಗೆ ಭದ್ರತೆಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ : ಪಿಎಫ್​ಐ ಮುಖಂಡ ಸುಬೇದ್​ ಹತ್ಯೆ ಪ್ರಕರಣ : 3 ಜನ ಆರ್​ಎಸ್​ಎಸ್​ ಕಾರ್ಯಕರ್ತರ ಬಂಧನ

ಎನ್‌ಐಎ, ಇಂಟೆಲಿಜೆನ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಕೇರಳದ ಐದು ಆರ್‌ಎಸ್ಎಸ್ ನಾಯಕರಿಗೆ ವೈ ವರ್ಗದ ಭದ್ರತೆಯನ್ನು ನೀಡಲಾಗುವುದು. ಆರ್‌ಎಸ್‌ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದೆ.

ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ನಿಷೇಧ ಮಾಡಿ ಗೃಹ ಸಚಿವಾಲಯ ಗುರುವಾರ ಆದೇಶ ಪ್ರಕಟಿಸಿತ್ತು.

ಇದನ್ನೂ ಓದಿ : PFI ಬ್ಯಾನ್ ಸ್ವಾಗತಾರ್ಹ : ಪಸ್ಮಂಡಾ ಮುಸ್ಲಿಂ ಮಂಡಳಿ