PFI ಬ್ಯಾನ್ ಸ್ವಾಗತಾರ್ಹ : ಪಸ್ಮಂಡಾ ಮುಸ್ಲಿಂ ಮಂಡಳಿ

Pasmanda Muslims

ಮಹತ್ವದ ಬೆಳವಣಿಗೆಯಲ್ಲಿ ಇಂದು ಕೇಂದ್ರ ಸರ್ಕಾರ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ PFIಯನ್ನು ಐದು ವರ್ಷಗಳವರೆಗೆ ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಪಸ್ಮಂಡಾ ಮುಸ್ಲಿಂ ಸಮುದಾಯ (Pasmanda Muslims) ಸ್ವಾಗತಿಸಿದೆ.

ಇಂದು ಪಿಎಫ್​​ಐ ಸೇರಿ ಇತರೆ 8 ಸಂಘಟನೆಗಳನ್ನು 5 ವರ್ಷ ನಿಷೇಧ ಮಾಡಿರುವ ಕೇಂದ್ರ ಸರ್ಕಾರ,  ಭಯೋತ್ಪಾದನಾ ಚಟುವಟಿಕೆ ನಿಗ್ರಹಕ್ಕಿರುವ UAPA ಕಾಯ್ದೆಯಡಿ ಪಿಎಫ್ಐಗೆ ನಿಷೇಧ ಹೇರಲಾಗಿದೆ. ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿ ಆಗುವ ಮೂಲಕ ಈ ಸಂಘಟನೆಗಳು ದೇಶದ ಭದ್ರತೆ ಮತ್ತು ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಗೆ ಮಾರಕವಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ನಿಷೇಧ ಆದೇಶದಲ್ಲಿ ತಿಳಿಸಿತ್ತು.

Pasmanda Muslims

ಈ ಬೆನ್ನಲ್ಲೇ, ದೇಶದ ಹಲವು ನಾಯಕರು ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದರು. ಇದೀಗ, ಮುಸ್ಲಿಂ ಸಮಾಜದ ದೊಡ್ಡ ವಿಭಾಗವಾದ ಪಸ್ಮಂಡಾ ಮುಸ್ಲಿಂ ಸಂಘಟನೆ PFI ಬ್ಯಾನ್ ಮಾಡಿರುವುದನ್ನು ಸ್ವಾಗತಿಸಿವೆ.

ಪಸ್ಮಂಡಾ ಸಮುದಾಯ (Pasmanda Muslims) ಮುಸ್ಲಿಂ ಧರ್ಮದಲ್ಲಿನ ದಲಿತ ಸಮುದಾಯವಾಗಿದೆ. ಈ ಸಂಘಟನೆ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದ ಪಿಎಫ್​ಐ ಸೇರಿದಂತೆ ಹಲವು ಸಂಘಟನೆಗಳ ಬ್ಯಾನ್ ಮಾಡಲು ತಮ್ಮ ಬೆಂಬಲವೂ ಇದೆ ಎಂದು ಈ ಹಿಂದೆಯೂ ಹೇಳಿಕೊಂಡಿತ್ತು.

ಇದನ್ನೂ ಓದಿ : BIG BREAKING: ಪಿಎಫ್ಐ 5 ವರ್ಷಗಳವರೆಗೆ ನಿಷೇಧ