ದೇಶದ 8 ನಗರಗಳಲ್ಲಿ ಏರ್​ಟೆಲ್​ನಿಂದ 5ಜಿ ಸೇವೆ

5G

ದೇಶದ ನಾಲ್ಕು ಮಹಾನಗರಗಳು ಸೇರಿದಂತೆ ಎಂಟು ನಗರಗಳಲ್ಲಿ ಭಾರ್ತಿ ಏರ್‌ಟೆಲ್ 5ಜಿ (5G) ಟೆಲಿಕಾಂ ಸೇವೆಗಳನ್ನು ಶನಿವಾರ ಪ್ರಾರಂಭಿಸುತ್ತಿದೆ.

ಮಾರ್ಚ್ 2024 ರ ವೇಳೆಗೆ ದೇಶದಾದ್ಯಂತ ಹಂತಹಂತವಾಗಿ ಸೇವೆ ಒದಗಿಸಲಾಗುತ್ತದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.

ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್‌ ಮೊಬೈಲ್‌ ಕಾಂಗ್ರೆಸ್‌ (IMC) ನಲ್ಲಿ ಮಾತನಾಡಿರುವ ಅವರು, ದೇಶದ ಎಂಟು ಪ್ರಮುಖ ನಗರಗಳಲ್ಲಿ 5ಜಿ ಮೊಬೈಲ್ ಸೇವೆಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಮಾರ್ಚ್ 2023ರ ವೇಳೆಗೆ ಬಹುತೇಕ ಭಾಗಗಳಿಗೆ ಸೇವೆ ಒದಗಿಸುತ್ತೇವೆ. ಮಾರ್ಚ್ 2024ರ ವೇಳೆಗೆ ಇಡೀ ದೇಶಕ್ಕೇ ವೇಗದ ಇಂಟರ್‌ನೆಟ್‌ ಸೇವೆಯನ್ನು ನೀಡುತ್ತೇವೆ ಎಂದು ಹೇಳಿದರು.

ಇದೊಂದು ಮಹತ್ವದ ದಿನ. ಹೊಸ ಯುಗ ಪ್ರಾರಂಭವಾಗಲಿದೆ. ಈ ಆರಂಭವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ವೇಳೆಯಲ್ಲೇ ನಡೆಯುತ್ತಿದೆ. ದೇಶದಲ್ಲಿ ಹೊಸ ಜಾಗೃತಿ, ಶಕ್ತಿ ಉದಯವಾಗುತ್ತಿದೆ. ಇದು ಜನರಿಗೆ ಹಲವಾರು ಹೊಸ ಅವಕಾಶಗಳನ್ನು ನೀಡಲಿದೆ ಎಂದು ಇದೇ ವೇಳೆ ಸುನಿಲ್ ಭಾರ್ತಿ ಮಿತ್ತಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ದೂರಸಂಪರ್ಕ ಸೇವೆಗಳಿಗೆ ಇಂದು (ಶನಿವಾರ) ಚಾಲನೆ ನೀಡಿದರು. ಆಯ್ದ ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆಗೆ ಚಾಲನೆ ನೀಡಲಾಗಿದ್ದು, ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here