ಭಾರತ್ ಜೋಡೋ ಯಾತ್ರೆಯಲ್ಲಿ ‘ಪೇಸಿಎಂ’ ಟೀಶರ್ಟ್ ಹಾಕಿದ್ದ ಕಾರ್ಯಕರ್ತ : FIR ದಾಖಲು

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ತಮಿಳುನಾಡಿನಿಂದ ರಾಜ್ಯಕ್ಕೆ ಪ್ರವೇಶಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸಾಗುತ್ತಿರುವ ಈ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪೇಸಿಎಂ ಪೋಸ್ಟರ್ ಇರುವ ಟೀಶರ್ಟ್​ ಧರಿಸಿ ಬಂದಿದ್ದ. ಇದೀಗ ಪೊಲೀಸರು ಆ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತ ಅಕ್ಷಯ್ ಕುಮಾರ್ ಪೇಸಿಎಂ ಎಂದು ಮುದ್ರಿತವಾಗಿರುವ ಟೀಶರ್ಟ್​ ಧರಿಸಿ ಭಾಗವಹಿಸಿದ್ದ. ಪೊಲೀಸರು ಯಾತ್ರೆಯಲ್ಲಿ ಕಾರ್ಯಕರ್ತನಿಂದ ಟೀಶರ್ಟ್​ ಬಿಚ್ಚಿಸಿದ್ದರು. ಅಲ್ಲದೇ, ಹಲ್ಲೆ ಮಾಡಿದ್ದರು. ಇದನ್ನೂ ಓದಿ : Paycm Poster Row : ಪೇಸಿಎಂ ಪೋಸ್ಟರ್ ವಿವಾದಕ್ಕೆ ತಿರುವು; ಎಫ್​ಐಆರ್​​ ಹಾಕಲು ಸಿಎಂ ಸೂಚನೆ

ಪೊಲೀಸರು ಕಾಂಗ್ರೆಸ್​​​ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವುದನ್ನು ಕಾಂಗ್ರೆಸ್​​ ನಾಯಕರು ಖಂಡಿಸಿದ್ದಾರೆ.

ಇದೀಗ, ಪೇಸಿಎಂ ಟೀಶರ್ಟ್​ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತ ಅಕ್ಷಯ್ ಕುಮಾರ್ ವಿರುದ್ಧ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : Paycm Poster Protest : ಕಾಂಗ್ರೆಸ್ನಿಂದ ಪೇಸಿಎಂ ಪೋಸ್ಟರ್ ಅಂಟಿಸಿ ಪ್ರತಿಭಟನೆ – ಬಂಧನ