ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್​​ನ ಹಣ ಕಳವು – ಮೂವರು ನೌಕರರು ಸೇರಿ 10 ಮಂದಿ ಬಂಧನ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್​ನ ತಾಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ 1.24 ಕೋಟಿ ರೂಪಾಯಿ ಮೊತ್ತವನ್ನು ಕದ್ದ ಪ್ರಕರಣ ಸಂಬಂಧ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಮೂವರು ಎಸ್​ಕೆಡಿಆರ್​ಪಿ ಟ್ರಸ್ಟ್​ನ ನೌಕರರು ಎಂದು ಪೊಲೀಸರು ತಿಳಿಸಿದ್ದಾರೆ.

ಧಾರವಾಡ ನಗರದ ರಾಯಪುರದಲ್ಲಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್​ನ ತಾಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ 1 ಕೋಟಿ 24 ಲಕ್ಷ ರೂಪಾಯಿ ಮೊತ್ತವನ್ನು ಕಳವು ಮಾಡಲಾಗಿತ್ತು.

ಬಂಧಿತರಿಂದ 79 ಲಕ್ಷದ 89 ಸಾವಿರ ರೂಪಾಯಿ ಮತ್ತು ಕೃತ್ಯಕ್ಕೆ ಬಳಸಿದ ಕಾರು, ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್​ನ್ನು ವಶಪಡಿಸಿಕೊಳ್ಳಲಾಗಿದೆ.

ಧಾರವಾಡ ಜಿಲ್ಲೆಯ ಸವಣೂರಿನ ಕುಶಾಲ ಕುಮಾರ, ನವಲಗುಂದದ ಬಸವರಾಜ, ಮಹಾಂತೇಶ, ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ್​ ಅಹಮದ್​, ವೀರೇಶ ಬಂಧಿತರು.

ಇವರಲ್ಲಿ ಕುಶಾಲ ಕುಮಾರ, ಬಸವರಾಜ, ಮಹಾಂತೇಶ ಈ ಮೂವರು ಎಸ್​ಕೆಡಿಆರ್​ಪಿ ಟ್ರಸ್ಟ್​ನ ನೌಕರರು.

ಕಚೇರಿಯ ಶೌಚಾಲಯದ ಕಿಂಡಿ ಮೂಲಕ ನುಗ್ಗಿ ಸೇಫ್ಟಿ ಲಾಕರ್​ ಒಡೆದು ಹಣ ಕಳವು ಮಾಡಿದ್ದರು ಎಂದು ಹುಬ್ಬಳ್ಳಿ ಮಹಾನಗರ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here