ಆಸ್ಪತ್ರೆಯಿಂದ ಮನೆಗೆ ಸಿದ್ದರಾಮಯ್ಯ – ಮನುಷ್ಯತ್ವಕ್ಕೆ ಮೀರಿದ ಸಿದ್ಧಾಂತವಿಲ್ಲ – ವೀಡಿಯೋ ನೋಡಿ

ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆಗೆ ವಾಪಸ್ಸಾಗಿದ್ದಾರೆ. ಬೆಂಗಳೂರಿನ ವೇಗಾಸ್‌ ಆಸ್ಪತ್ರೆಯಲ್ಲಿ ವೈದ್ಯರ ಜೊತೆಗೆ ಮಾಧ್ಯಮಗೋಷ್ಠಿ ನಡೆಸಿದ ಅವರು ತಾವು ಆರೋಗ್ಯವಾಗಿದ್ದು, ೧೦ ದಿನಗಳವರೆಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ತಮ್ಮನ್ನು ಭೇಟಿ ಆಗಿ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಟಗರು, ಮನುಷ್ಯತ್ವ ಮೀರಿದ ಸಿದ್ಧಾಂತ ಜಗತ್ತಿನಲ್ಲೇ ಇಲ್ಲ. ಕಷ್ಟ ಕಾಲದಲ್ಲಿ ಜೊತೆಯಾದ ಎಲ್ಲರಿಗೂ ನಾನು ಕೃತಜ್ಞ ಎಂದರು. ಆದರೆ ರಾಜೀನಾಮೆ ಸೇರಿದಂತೆ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲ್ಲ ಈಗ ಮಾತಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ನಾಟಿ ಕೋಳಿ ಸಾರು:

ಆಸ್ಪತ್ರೆಯಲ್ಲಿದ್ದಾಗ ವಿಶೇಷ ಕಾಳಜಿ ವಹಿಸುತ್ತಿದ್ದ ವೈದ್ಯ ನಾರಾಯಣಸ್ವಾಮಿ ಅವರ ಪತ್ನಿಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ, ಮನೆಯಿಂದ ದಿನಾ ಊಟ ಮತ್ತು ನಾಟಿ ಕೋಳಿ ಸಾರು ಕಳಿಸ್ತಿದ್ರು ಎಂದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು ಮನೆಗೆ ಮರಳುತ್ತಿದ್ದೇನೆ. ಹಿಂದಿನಂತೆ ಕೆಲಸ ಕಾರ್ಯಗಳನ್ನು ಕೈಗೊಳ್ಳುವಷ್ಟು ನನ್ನ ಆರೋಗ್ಯ ಸದೃಢವಾಗಿದೆ. ಯಾವ ಆತಂಕವೂ ಬೇಡ. ನಾನು ಮೊದಲಿನಂತೆ ಸಕ್ರಿಯವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.

ರಾಜ್ಯಾದ್ಯಂತ ಅಭಿಮಾನಿಗಳು ನನ್ನ ಆರೋಗ್ಯ ಸುಧಾರಣೆಯಾಗುವಂತೆ ಹರಕೆ, ಪೂಜೆಗಳನ್ನು ಸಲ್ಲಿಸಿದ್ದಾರೆ, ಕೆಲವರು ಆಸ್ಪತ್ರೆಗೆ ಬಂದು ಪ್ರಸಾದವನ್ನೂ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಂಡು ಮಾತು ಹೊರಡುತ್ತಿಲ್ಲ. ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ಜನಸೇವೆಯಲ್ಲಿರುವ ವ್ಯಕ್ತಿ ಇದಕ್ಕಿಂತ ಹೆಚ್ಚಿನದನ್ನು ಏನು ನಿರೀಕ್ಷಿಸಲು ಸಾಧ್ಯ..?

ಈ ವೇಳೆ ವಿವಿಧ ಸಮುದಾಯಗಳ ಮಠಾಧೀಶರು ಹಾಗೂ ಪಕ್ಷಾತೀತವಾಗಿ ಹಲವು ನಾಯಕರು ನನ್ನನ್ನು ಭೇಟಿಯಾಗಿ ಧೈರ್ಯತುಂಬಿ, ಗುಣಮುಖರಾಗುವಂತೆ ಹಾರೈಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹೆಚ್ಚಿನ ಕಾಳಜಿ ವಹಿಸಿ ನನ್ನ ಆರೈಕೆ ಮಾಡಿದ್ದಾರೆ, ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ. ಅವರೆಲ್ಲರ ಸೇವೆಗೆ ನಾನು ಆಭಾರಿ. ಮನುಷ್ಯತ್ವವನ್ನು ಮೀರಿದ ಸಿದ್ಧಾಂತ ಜಗತ್ತಿನಲ್ಲೇ ಇಲ್ಲ. ಕಷ್ಟಕಾಲದಲ್ಲಿ ಜೊತೆಯಾದವರೆಲ್ಲರೂ ನಾನು ಕೃತಜ್ಞ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here