ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಸಕ್ರಮದಲ್ಲಿ ಆಗಿರುವ ಅಕ್ರಮವನ್ನು ಬಯಲು ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸಾಮಂತ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ ೫೦೪, ೫೦೬ ಮತ್ತು ೩೪ರಡಿ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ ತಾಲೂಕಿನ ಕೊಯಿಲ ಪಾಂಡವರ ಗುಡ್ಡೆಯ ಉದಯ ಪೂಜಾರಿ ಮತ್ತು ಆತನ ಸಹಚರ ಉದಯ ಶೆಟ್ಟಿ ಸಿದ್ದಕಟ್ಟೆ ಪರನೀರು ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ನವೆಂಬರ್ ೧೬ರಂದು ದೂರವಾಣಿ ಕರೆ ಮಾಡಿದ್ದ ಇವರಿಬ್ಬರು ತಮ್ಮನ್ನು ಕೊಲ್ಲಲು ಉತ್ತರಪ್ರದೇಶ ಮೂಲದ ಯುವಕರನ್ನು ಸೆಟ್ ಮಾಡಿರುವುದಾಗಿ ಕೊಲೆ ಬೆದರಿಕೆ ಹಾಕಿದ್ದರು.
೨೦೧೮-೨೩ರ ಅವಧಿಯಲ್ಲಿ ಮೊದಲ ಬಾರಿಗೆ ರಾಜೇಶ್ ನಾಯಕ್ ಶಾಸಕರಾಗಿದ್ದ ಅವಧಿಯಲ್ಲಿ ಬಂಟ್ವಾಳ ತಾಲೂಕಲ್ಲಿ ಅಕ್ರಮ-ಸಕ್ರಮ ಮಂಜೂರಾತಿಯಲ್ಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸಾಮಂತ್ ಅವರು ನಿರಂತರವಾಗಿ ಹೋರಾಟ ಮಾಡಿದ್ದರು.
ADVERTISEMENT
ADVERTISEMENT