ಮದೀನಾದಲ್ಲಿ ನಟಿ ಸಂಜನಾ ಗಲ್ರಾನಿ

ಕನ್ನಡದ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಪತಿ ಡಾ ಅಜೀಜ್​ ಪಾಷಾ ಮತ್ತು ಮಗುವಿನ ಜೊತೆಗೆ ಮೆಕ್ಕಾ-ಮದಿನಾಕ್ಕೆ ತೆರಳಿದ್ದಾರೆ.

ತಾವು ಮದೀನಾಕ್ಕೆ ತೆರಳಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬುರ್ಖಾ ಧರಿಸಿ ಮದೀನಾದಲ್ಲಿ ಅಲ್ಲಾಹುನ ಪ್ರಾರ್ಥನೆ ಮಾಡಿದ್ದಾರೆ.

ದೀರ್ಘಕಾಲ ಸಿನಿಮಾದಿಂದ ದೂರ ಉಳಿದಿದ್ದ ಸಂಜನಾ ಈಗ ಮಲಯಾಳಂನ ಕಪ್ಪ ಸಿನಿಮಾದ ಮೂಲಕ ಮತ್ತೆ  ತೆರೆ ಮೇಲೆ ಬರ್ತಿದ್ದಾರೆ.

ಬೆಂಗಳೂರು ಮೂಲದ ಸಂಜನಾ ಮಾಡೆಲಿಂಗ್​ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟವರು. 2006ರಲ್ಲಿ ಇವರು ಕನ್ನಡದಲ್ಲಿ ಗಂಡ ಹೆಂಡತಿ ಸಿನಿಮಾ ಮೂಲಕ ಯುವಕರ ನಿದ್ದೆಗೆಡಿಸಿದ್ದರು.

ಸಂಜನಾ ಮತ್ತು ಡಾ ಅಜೀಜ್​ ಪಾಷಾ ದಂಪತಿಯ ಮಗನ ಹೆಸರು ಅಲಾರಿಕ್​