Rashmika Mandanna: ಕಿರಿಕ್ ಬೆಡಗಿಯ ಹೊಸ ಕಿರಿಕ್ ಡ್ರಾಮಾ..? ಇದೆಲ್ಲಾ ಬೇಕಿತ್ತಾ ರಶ್ಮಿಕಾ?

ಕಿರಿಕ್ ಪಾರ್ಟಿ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ  ನ್ಯಾಷನಲ್ ಕ್ರಷ್ ಆಗಿ ಮಾರ್ಪಟ್ಟು ಟಾಲಿವುಡ್ ಅಲ್ಲದೇ, ಬಾಲಿವುಡ್​ನಲ್ಲಿಯೂ ಮಿಂಚುತ್ತಿದ್ದಾರೆ. ಆಗಾಗ್ಗೆ ಸಲ್ಲದ ಕಾರಣಕ್ಕೂ ಸುದ್ದಿಯಾಗುತ್ತಾರೆ.

ಇದೀಗ ಮೇಕಪ್ ಮಾಡಲು ಬಂದ ತಮ್ಮ ಸಹಾಯಕಿಯರ ಮೇಲೆ ರಶ್ಮಿಕಾ ಮಂದಣ್ಣ ಗರಂ ಆಗಿರುವ ವಿಡಿಯೋ ವೈರಲ್ ಆಗಿದೆ.

ಏನ್ ನಡೀತಾ ಇದೆ ಇಲ್ಲಿ..? ಟ್ಯಾಲೆಂಟ್​ಗೆ ಇಲ್ಲಿ ಬೆಲೆಯೇ ಇಲ್ಲ. ಎಲ್ಲಿ ಟ್ಯಾಲೆಂಟ್ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ

ಎಂದು ರೇಗಾಡುತ್ತಾ ಎದ್ದು ಹೋಗುತ್ತಾರೆ. ಸಹಾಯಕರು ತಡೆಯಲು ಪ್ರಯತ್ನಿಸಿದರೂ ನಿಲ್ಲಲ್ಲ. ರಶ್ಮಿಕಾ ಅವರ ಸಹಾಯಕರು ಮೊಬೈಲ್ ವಿಡಿಯೋ ರೆಕಾರ್ಡಿಂಗ್ ಗಮನಿಸಿ, ಅದಕ್ಕೆ ಅಡ್ಡಿಪಡಿಸಲು ನೋಡುತ್ತಾರೆ.

ಈ ವಿಡಿಯೋ ನೋಡಿ ಇದು ರಿಯಲ್ ಎಂದು ಭಾವಿಸಿದ್ರೆ ಅದು ನಿಮ್ಮ ತಪ್ಪು. ಇದು ಡ್ರಾಮಾ ಅಂತೆ. ಕಂಪನಿಯೊಂದರ ಜಾಹೀರಾತು ಸಲುವಾಗಿ ಹೀಗೆ ಮಾಡಲಾಗಿದೆ ಅಂತೆ. ಆದರೆ, ಟ್ರೋಲಿಗರು ಬಿಡ್ತಾರಾ..? ರಶ್ಮಿಕಾ ಮಂದಣ್ಣರನ್ನು ಒಂದು ಆಟ ಆಡಿಕೊಳ್ಳುತ್ತಿದ್ದಾರೆ.