ಮೋದಿ ಸರ್ಕಾರಕ್ಕೆ 9 ವರ್ಷ.. ಕಾಂಗ್ರೆಸ್​ನಿಂದ 9 ಪ್ರಶ್ನೆ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿ 9 ವರ್ಷ ಪೂರೈಸಿದರೂ.. ಅವರು ಕೊಟ್ಟ ಭರವಸೆಗಳನ್ನು ಮಾತ್ರ ಈಡೇರಿಸಿಲ್ಲ ಎಂದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್​ ಆರೋಪಿಸಿದೆ. ಪ್ರಜೆಗಳನ್ನು ಮೋಸ ಮಾಡಿದ ಕಾರಣಕ್ಕೆ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿಮರ್ಶಿಸುತ್ತಾ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದ ಅಂಶಗಳನ್ನು ಆಧಾರವಾಗಿಟ್ಟು ನೌ ಸಾಲ್.. ನೌ ಸವಾಲ್ ಹೆಸರಿನಲ್ಲಿ ಬಿಜೆಪಿ ಸರ್ಕಾರಕ್ಕೆ 9 ಪ್ರಶ್ನೆಗಳನ್ನು ಕಾಂಗ್ರೆಸ್ ಕೇಳಿದೆ.

ನೌ ಸಾಲ್.. ನೌ ಸವಾಲ್

1. ದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಪ್ರಮಾಣ ಏಕೆ ವಿಪರೀತ ಪ್ರಮಾಣದಲ್ಲಿದೆ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ.. ಬಡವರು ಇನ್ನಷ್ಟು ಬಡವರಾಗಿ ಏಕೆ ಬದಲಾಗುತ್ತಿದ್ದಾರೆ.? ದೇಶದ ಆಸ್ತಿಗಳನ್ನು ಪ್ರಧಾನಿ ಮೊದಿ ಏಕೆ ತನ್ನ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ.

2. ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ರೈತರ ಜೊತೆಗೆ ಮಾಡಿಕೊಂಡ ಒಪ್ಪಂದಗಳನ್ನು ಏಕೆ ಗೌರವಿಸುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಕಾನೂನುಬದ್ಧ ಮಾಡುತ್ತಿಲ್ಲ.? ಒಂಬತ್ತು ವರ್ಷವಾದರೂ ರೈತರ ಆದಾಯ ಏಕೆ ದ್ವಿಗುಣವಾಗಿಲ್ಲ.

3. ನಿಮ್ಮ ಗೆಳೆಯ ಅದಾನಿ ಪ್ರಯೋಜನಗಳಿಗಾಗಿ ಎಲ್​ಐಸಿ, ಎಸ್​ಬಿಐನಲ್ಲಿ ಇರುವ ಜನರ ಕಷ್ಟಾರ್ಜಿತವನ್ನು ಏಕೆ ರಿಸ್ಕ್​​ನಲ್ಲಿ ಇಟ್ಟಿದ್ದೀರಾ? ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಏಕೆ ಮೌನವಾಗಿದ್ದೀರಾ?

4. ನೀವು ಕ್ಲೀನ್ ಚಿಟ್​ ನೀಡಿದರೂ.. ಚೀನಾ ಏಕೆ ಭಾರತದ ಭೂಭಾಗಳನ್ನು ಆಕ್ರಮಿಸಲು ಪ್ರಯತ್ನಿಸುತ್ತಿದೆ.18 ಬಾರಿ ಚರ್ಚೆ ನಡೆದರೂ ಏಕೆ ಒಮ್ಮತ ಮೂಡಿಲ್ಲ.?

5. ಚುನಾವಣೆಯ ಲಾಭಕ್ಕಾಗಿ ಏಕೆ ಕೋಮು ರಾಜಕೀಯಗಳನ್ನು ಏಕೆ ಉಪಯೋಗಿಸಿಕೊಳ್ಳುತ್ತಿದ್ದೀರಾ? ಸಮಾಜದಲ್ಲಿ ಏಕೆ ಭಯಾನಕ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದೀರಾ?

6. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿದ್ದರೂ ಏಕೆ ಸುಮ್ಮನಿದ್ದೀರಾ? ಸಾಮಾಜಿಕ ನ್ಯಾಯದ ಬುನಾದಿಯನ್ನು ಏಕೆ ನಾಶ ಮಾಡುತ್ತಿದ್ದೀರಾ?

7. ಸಂವಿಧಾನದ ಮೌಲ್ಯಗಳು, ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಏಕೆ ಬಲಹೀನ ಮಾಡುತ್ತಿದ್ದೀರಾ? ವಿರೋಧಪಕ್ಷಗಳ ನಾಯಕರ ಮೇಲೆ ಏಕೆ ಪ್ರತೀಕಾರ ರಾಜಕೀಯಗಳನ್ನು ಮಾಡುತ್ತಿದ್ದೀರಾ? ಧನಬಲವನ್ನು ಬಳಸಿಕೊಂಡು ಚುನಾಯಿತ ಸರ್ಕಾರಗಳನ್ನು ಏಕೆ ಕೆಡವುತ್ತಿದ್ದೀರಾ?

8. ಇದ್ದಕ್ಕಿದ್ದಂತೆ ಲಾಕ್​ಡೌನ್​ ವಿಧಿಸಿದ ಕಾರಣ ನಷ್ಟ ಹೋದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಏಕೆ ಸಹಾಯ ಮಾಡಲಿಲ್ಲ.? ಕೋವಿಡ್ ಬಾಧಿತ ಕುಟುಂಬಗಳಿಗೆ ಏಕೆ ಪರಿಹಾರ ಕೊಡುತ್ತಿಲ್ಲ

9. ಬಡವರಿಗಾಗಿ ಇರುವ ಜನಕಲ್ಯಾಣ ಯೋಜನೆಗಳಿಗೆ ಬಜೆಟ್​ನಲ್ಲಿ ಏಕೆ ಅನುದಾನ ಕಡಿಮೆ ಮಾಡುತ್ತಿದ್ದೀರಾ? ಕಠಿಣ ನಿಬಂಧನೆಗಳನ್ನು ಜಾರಿ ಮಾಡುವ ಮೂಲಕ ಅವುಗಳನ್ನು ಏಕೆ ದುರ್ಬಲ ಮಾಡುತ್ತಿದ್ದೀರಾ?

ಈ ಒಂಬತ್ತು ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ಪ್ರಶ್ನಿಸಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು. ಈ ದಿನವನ್ನು ಕೇಂದ್ರ ಸರ್ಕಾರ ಮಾಫಿ ದಿವಸ್ ಆಗಿ ಆಚರಿಸಬೇಕು ಎಂದು ಕಾಂಗ್ರೆಸ್​ ಒತ್ತಾಯಿಸಿದೆ.