ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಶಕುನ ಪದ ಬಳಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತೀಯ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಶನಿವಾರದೊಳಗೆ ಸಂಜೆ ೬ ಗಂಟೆಯೊಳಗೆ ಉತ್ತರ ನೀಡುವಂತೆ ರಾಹುಲ್ ಅವರಿಗೆ ಆಯೋಗ ಸೂಚಿಸಿದೆ.
ರಾಜಸ್ಥಾನದ ಜಲೋರ್ನಲ್ಲಿ ಮಾಡಿದ್ದ ಚುನಾವಣಾ ಭಾಷಣದಲ್ಲಿ ಮೋದಿ ವಿರುದ್ಧ ರಾಹುಲ್ ಅವರು ಪರೋಕ್ಷವಾಗಿ ಅಪಶಕುನ ಪದ ಬಳಸಿದ್ದರು.
ನಮ್ಮ ಹುಡುಗರು ವಿಶ್ವಕಪ್ ಗೆಲ್ಲುತ್ತಿದ್ದರು. ಆದರೆ ಆ ಒಬ್ಬರ ಅಪಶಕುನದಿಂದ ವಿಶ್ವಕಪ್ ಫೈನಲ್ನಲ್ಲಿ ಸೋತರು ಎಂದು ಹೇಳುವ ಮೂಲಕ ವಿಶ್ವಕಪ್ ಫೈನಲ್ ನೋಡಲು ಪ್ರಧಾನಿ ಮೋದಿ ಹೋಗಿದ್ದರಿಂದ ಭಾರತ ಸೋತಿತ್ತು ಎಂದು ಟೀಕಿಸಿದ್ದರು.
ರಾಹುಲ್ ಗಾಂಧಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.
ಇವತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ನವೆಂಬರ್ ೩೦ರಂದು ತೆಲಂಗಾಣ ವಿಧಾನಸಭಾ ಮತದಾನ ನಡೆಯಲಿದೆ.