ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಸೆಲೆಬ್ರೇಷನ್…!

ಸ್ಯಾಂಡಲ್ ವುಡ್‌ ನ “ರಿಯಲ್‌ ಸ್ಟಾರ್‌” ಉಪೇಂದ್ರ ಪತ್ನಿ “ಬಂಗಾಳಿ ಚೆಲುವೆ” ಪ್ರಿಯಾಂಕ ಉಪೇಂದ್ರ ಇತ್ತೀಚೆಗಷ್ಟೇ ತಮ್ಮ ೪೨ನೇ ಹುಟ್ಟುಹಬ್ಬವನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ “ಜೆಟ್ ಲಾಗ್”‌ ನಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಅದ್ದೂರಿಯಾಗಿ ಆಚರಿಸಿಕೊಂಡರು.

ಚಂದನವನದ ಸೆಲೆಬ್ರಿಟಿಗಳಾದ ರಾಕಿಂಗ್ ಸ್ಟಾರ್‌ ಯಶ್‌, ನಟಿ ಮಂಡ್ಯ ಸಂಸದೆ ಸುಮಲತಾ, ಕವಿತಾ ಲಂಕೇಶ್‌, ಕೀರ್ತಿ ವಿಷ್ಣುವರ್ಧನ್‌, ರಾಕ್ ಲೈನ್ ವೆಂಕಟೇಶ್, ನಟಿ ರಾಗಿಣಿ ದ್ವಿವೇದಿ, ಹರ್ಷಿಕಾ ಪೂಣಚ್ಚ, ಭುವನ್‌ ಪೊನ್ನಣ್ಣ, ನಿರ್ಮಾಪಕಿ ಶಿಲ್ಪಾ ಗಣೇಶ್, ಗುರುಕಿರಣ್, ಪಲ್ಲವಿ, ನಿರ್ಮಾಪಕ ಸೌಂದರ್ಯ ಜಗದೀಶ್, ಸೋನು ಗೌಡ, ಜೆಕೆ, ಪಾರೂಲ್ ಯಾದವ್, ಅಮೂಲ್ಯ ಜಗದೀಶ್, ಮೇಘನಾ ಗಾಂವ್ಕರ್‌, ಕಾರುಣ್ಯ ರಾಮ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ತಿಳಿ ಹಸಿರು ಬಣ್ಣದ ಗೌನ್‌ ಧರಿಸಿದ ಪ್ರಿಯಾಂಕ, ಕಪ್ಪು ಬಣ್ಣದ ಹಾಫ್‌ ಸೂಟ್‌ ನಲ್ಲಿ ಮಿಂಚುತ್ತಿದ್ದ ಉಪೇಂದ್ರ, ಮಕ್ಕಳಾದ ಆಯುಷ್‌, ಐಶ್ವರ್ಯ, ಅಪ್ಪ, ಅಮ್ಮ, ಅಣ್ಣ ಸುಧೀಂದ್ರ ಸೇರಿದಂತೆ ಇಡೀ ಕುಟುಂಬ ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದರು.

                                 ಉಪೇಂದ್ರ ಕುಟುಂಬ

ನಟಿ ಸೋನು ಗೌಡ, ಮೇಘನಾ ಗಾಂವ್ಕರ್‌, ಪಾರೂಲ್‌ ಯಾದವ್

‌                        ಪ್ರಿಯಾಂಕ ಉಪೇಂದ್ರ ಮತ್ತು ಅಮೂಲ್ಯ ಜಗದೀಶ್

LEAVE A REPLY

Please enter your comment!
Please enter your name here