Honey Trap: ಉದ್ಯಮಿಗೆ ಹನಿಟ್ರ್ಯಾಪ್​ – ಕನ್ನಡದ ನಟ ಬಂಧನ, ಇಬ್ಬರು ಯುವತಿಯರ ಮೇಲೂ ಕೇಸ್​

Actor Yuvaraj
ಹನಿಟ್ರ್ಯಾಪ್​ (Honey Trap) ಪ್ರಕರಣದಲ್ಲಿ ಬೆಂಗಳೂರು ಪೊಲೀಸರು (Bengaluru Police) ಕನ್ನಡದ ನಟನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದ ನಿವಾಸಿ ಯುವರಾಜ್​ ಅಲಿಯಾಸ್​ ಯುವ ಬಂಧಿತ ಯುವ ನಟ. ಈತನ ಇಬ್ಬರು ಸ್ನೇಹಿತೆಯರಾದ ಕವನ ಮತ್ತು ನಿಧಿ ಎಂಬವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ನಾಲ್ಕು ವರ್ಷದ ಹಿಂದೆ 73 ವರ್ಷದ ಉದ್ಯಮಿ ಮತ್ತು ಕವನಳ ಪರಿಚಯ ಆಗಿತ್ತು. ವಾರದ ಹಿಂದೆಯಷ್ಟೇ ಈಕೆ ನಿಧಿಯನ್ನೂ ಕೂಡಾ ಆ ಉದ್ಯಮಿಗೆ ಪರಿಚಯಿಸಿದ್ದಳು.
ನಿಧಿ ಮತ್ತು ಕವನ ಇಬ್ಬರ ಜೊತೆಯೂ ಆ ಉದ್ಯಮಿ ವಾಟ್ಸಾಪ್​ ಮೂಲಕ ಸಂಪರ್ಕದಲ್ಲಿದ್ದರು.
ಇಬ್ಬರೂ ತಮ್ಮ ಪೋಟೋಗಳನ್ನು ಆ ಉದ್ಯಮಿಗೆ ಕಳಿಸುತ್ತಿದ್ದರು.
ಈ ನಡುವೆ ಆಗಸ್ಟ್​ 3ರಂದು ತನ್ನನ್ನು ಭೇಟಿ ಆಗುವಂತೆ ನಿಧಿ ಆ ಉದ್ಯಮಿಗೆ ಹೇಳಿದ್ದಳು. ಅದರಂದತೆ ಭೇಟಿ ಆದ ವೇಳೆ ಆಕೆಯ ಜೊತೆಗಿದ್ದ ಇಬ್ಬರು ಅಪರಿಚಿತರು ನಾವು ಪೊಲೀಸರು ಎಂದು ಹೇಳಿಎ ಆ ಉದ್ಯಮಿಯ ಕಾರಿನೊಳಗೆ ನುಗ್ಗಿದ್ದರು.
ಅಲ್ಲದೇ ಕವನ ಮತ್ತು ನಿಧಿಯ ಜೊತೆಗೆ ಉದ್ಯಮಿ ಮಾಡಿದ್ದ ವಾಟ್ಸಾಪ್​ ಮೆಸೇಜ್​ ಆಧರಿಸಿ ಕೇಸ್​ ಹಾಕಿದ್ದಾಗಿಯೂ ಒಂದು ವೇಳೆ ದುಡ್ಡು ಕೊಟ್ಟರೇ ಪ್ರಕರಣ ಮುಚ್ಚಿ ಹಾಕುವುದಾಗಿಯೂ ಬೆದರಿಸಿದ್ದರು.
ಇವರ ಬೆದರಿಕೆ ಹಿನ್ನೆಲೆಯಲ್ಲಿ ಎರಡು ಬಾರಿ ಆ ಉದ್ಯಮಿ ಒಟ್ಟು 10 ಲಕ್ಷ ರೂಪಾಯಿ ದುಡ್ಡು ನೀಡಿದ್ದ. ಆ ಬಳಿಕ ಆ ದುಷ್ಕರ್ಮಿಗಳ ಆ ಉದ್ಯಮಿಯಿಂದ ಮತ್ತೆ 5 ಲಕ್ಷ ರೂಪಾಯಿ ದೋಚಿದ್ದರು.
ಬೆದರಿಕೆ ಮತ್ತು ಸುಲಿಗೆ ನಿಲ್ಲದ ಹಿನ್ನೆಲೆಯಲ್ಲಿ ಆ ಉದ್ಯಮಿ ಹಲಸೂರು ಗೇಟ್​ ಠಾಣೆ (Halasuru Gate Police) ಪೊಲೀಸರು ದೂರು ನೀಡಿದ್ದರು.

LEAVE A REPLY

Please enter your comment!
Please enter your name here