ಗೃಹ ಜ್ಯೋತಿ ಅಥವಾ ಪ್ರತಿ ತಿಂಗಳು 200 ಯುನಿಟ್ವರೆಗಿನ ಉಚಿತ ವಿದ್ಯುತ್ ಸಂಬಂಧ ಸಿಎಂ ಸಿದ್ದರಾಮಯ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಜುಲೈ ತಿಂಗಳಿಂದ ಬಳಕೆ ಮಾಡುವ ವಿದ್ಯುತ್ಗೆ ಆಗಸ್ಟ್ನಿಂದ ನೀಡುವ ಬಿಲ್ಗೆ ಗೃಹಜ್ಯೋತಿ ಯೋಜನೆ ಅನ್ವಯವಾಗಲಿದೆ.
1. ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಯೋಜನೆ ಲಾಭ ಸಿಗಲಿದೆ.
2. ತಿಂಗಳ ಸರಾಸರಿ ಬಳಕೆಯ ಯುನಿಟ್ಗಳ ಮೇಲೆ ಶೇಕಡಾ 10ರಷ್ಟು ವಿದ್ಯುತ್ನ್ನು ಮಾತ್ರ ಉಚಿತವಾಗಿ ಬಳಸಬಹುದು.
ಉದಾಹರಣೆ:
ಅಂದರೆ ಒಂದು ಮನೆಯಲ್ಲಿ ಕಳೆದ ವರ್ಷದ ಏಪ್ರಿಲ್1ರಿಂದ ಈ ವರ್ಷದ ಮಾರ್ಚ್ 31ರವರೆಗೆ 12 ತಿಂಗಳಲ್ಲಿ ಬಳಸಿದ ಮಾಸಿಕ ಸರಾಸರಿ ವಿದ್ಯುತ್ ಒಂದು ವೇಳೆ 99 ಯುನಿಟ್ಗಳಾಗಿದ್ದರೆ ಆಗ ಆ ಮನೆಗೆ ಸರಾಸರಿ 99 ಯುನಿಟ್ನ ಜೊತೆಗೆ 9 ಯುನಿಟ್ ವಿದ್ಯುತ್ (ಶೇಕಡಾ 10ರಷ್ಟು ಹೆಚ್ಚುವರಿ) ಅಂದರೆ 99 ಯುನಿಟ್ನ್ನಷ್ಟು ವಿದ್ಯುತ್ನ್ನು ಉಚಿತವಾಗಿ ಬಳಸಲು ಅವಕಾಶವಿದೆ.
ಒಂದು ವೇಳೆ ವಿದ್ಯುತ್ ಬಳಕೆ ಸರಾಸರಿ ವಿದ್ಯುತ್ ಬಳಕೆ+ಹೆಚ್ಚುವರಿ ವಿದ್ಯುತ್ ಬಳಕೆ ಮಿತಿಯನ್ನು ಅಂದರೆ 99 ಯುನಿಟ್ ಮೀರಿದರೆ ಆಗ ಆ ಮನೆಯವರು ಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.