Aadhar Update: ಆಧಾರ್ ಕಾರ್ಡ್.. 9 ದಿನವಷ್ಟೇ ಗಡುವು.. ಬೇಗ ಬೇಗ

ಭಾರತೀಯರಿಗೆಲ್ಲಾ ಆಧಾರ್ ಕಾರ್ಡ್ ಎಷ್ಟು ಇಂಪಾರ್ಟೆಂಟ್ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಿಲ್ಲ.. ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕೆಂದರೂ, ಬ್ಯಾಂಕ್ ಖಾತೆ ಓಪನ್ ಮಾಡಲು, ಡಿಎಲ್ ಬೇಕಿದ್ದರೂ.. ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಅತ್ಯವಶ್ಯ.

ಆದರೆ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಏನದರೂ ತಪ್ಪುಗಳಿದ್ದಲ್ಲಿ ಅದನ್ನು ಕೂಡಲೇ ಸರಿಪಡಿಸಿಕೊಳ್ಳುವುದು ಒಳಿತು. ಅಷ್ಟೇ ಅಲ್ಲ, ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಯುಐಡಿಐ ಈ ಹಿಂದೆಯೇ ಸೂಚಿಸಿತ್ತು. ಆದರೆ, ಈ ಗಡುವು ಈಗ ಸಮೀಪಿಸಿದೆ.

ಈ ಹಿಂದೆ ಪ್ರಕಟವಾದ ಮಾಹಿತಿ ಪ್ರಕಾರ, ಆನ್‌ಲೈನ್ ಪೋರ್ಟಲ್ ಮೂಲಕ ಒಂದು ರೂಪಾಯಿ ಕೂಡ ನೀಡದೇ ಅಪ್‌ಡೇಟ್ ಮಾಡಿಕೊಳ್ಳಲು ಜೂನ್ 14ರವರೆಗೂ ಅವಕಾಶವಿದೆ. ಆ ನಂತರ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಸಬೇಕು ಎಂದರೇ ಕನಿಷ್ಠ 50 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

ವಾಸ್ತವದಲ್ಲಿ ಈ ಗಡುವು ಮೇ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ, ಎಲ್ಲರೂ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ, ಗಡುವನ್ನು ಜೂನ್ 14ರವರೆಗೂ ವಿಸ್ತರಣೆ ಮಾಡಿತ್ತು.. ಹೀಗಾಗಿ, ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಸದವರು ಈ ಕೂಡಲೇ ಉಚಿತವಾಗಿ ಅಪ್‌ಡೇಟ್ ಮಾಡಿಸಿಕೊಳ್ಳಿ