ರೈಲು ದುರಂತದ ಹಿಂದೆ ಸಂಚು ಎಂಬ ಪೊಳ್ಳು – ಸಿಬಿಐ ಮಾಜಿ ನಿರ್ದೇಶಕ ಆಕ್ರೋಶ

ಕೇಂದ್ರ ಸರ್ಕಾರ, ರೈಲ್ವೇ ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು, ಅಸಮರ್ಥತೆಯನ್ನು ಮುಚ್ಚಿ ಹಾಕಲು, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಒಡಿಶಾದಲ್ಲಿ ನಡೆದ ಘೋರ ರೈಲು ದುರಂತಕ್ಕೆ ವಿಧ್ವಂಸಕ ಕೃತ್ಯದ ಆಯಾಮವನ್ನು ತೆರೆ ಮೇಲೆ ತಂದಿದ್ದಾರೆ ಎಂದು ಸಿಬಿಐ ಮಾಜಿ ನಿರ್ದೇಶಕ, ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರರಾವ್​ ಆರೋಪ ಮಾಡಿದ್ದಾರೆ.

ಎಲ್ಲಿ ಅಪಘಾತಗಗಳು ನಡೆದರೂ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಇದೊಂದು ಅಭ್ಯಾಸ ಆಗಿಬಿಟ್ಟಿದೆ.  ಸೋಷಿಯಲ್ ಮೀಡಿಯಾಗಳಲ್ಲಿ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಎರಡು ರೈಲ್ವೇ ಪೊಲೀಸ್​ ಜಿಲ್ಲೆಗಳಿಗೆ ಎಸ್​ಪಿಯಾಗಿ, ಒಡಿಶಾ ರೈಲ್ವೇ ಪೊಲೀಸ್ ಹೆಚ್ಚುವರಿ ಡಿಜಿಪಿಯಾಗಿ ಕೆಲಸ ಮಾಡಿದ ಅನುಭವದ ಮೇಲೆ ಈ ಮಾತುಗಳನ್ನು ಹೇಳುತ್ತಿದ್ದೇನೆ.

ರೈಲ್ವೇ ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು, ಅಸಮರ್ಥತೆಯನ್ನು ಮುಚ್ಚಿ ಹಾಕಲು, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಂಚು ಆಯಾಮವನ್ನು ತೆರೆ ಮೇಲೆ ತರುವುದು ಅವರಿಗೆ ಅಭ್ಯಾಸ ಆಗಿಬಿಟ್ಟಿದೆ. ತನಿಖಾ ವರದಿ ಬರುವಷ್ಟರಲ್ಲಿ ಈ ಘಟನೆಯನ್ನು ಜನ ಮರೆತು ಹೋಗಿರುತ್ತಾರೆ ಎಂದು ಸಿಬಿಐ ಮಾಜಿ ನಿರ್ದೇಶಕ, ನಿವೃತ್ತ ಐಪಿಎಸ್ ಅಧಿಕಾರಿ ಎಂ ನಾಗೇಶ್ವರರಾವ್​ ಆರೋಪ ಮಾಡಿದ್ದಾರೆ.

ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ಬೆರೆಸಿ ಮಾಡುತ್ತಿರುವ ಪ್ರಚಾರದ, ಸುಳ್ಳು ಸುದ್ದಿಗಳ ಮಾಯೆಯಲ್ಲಿ ಜನ ಸಿಲುಕಬಾರದು ಎಂದು ಜನತೆಯಲ್ಲಿ ನಾಗೇಶ್ವರ್ ರಾವ್ ಮನವಿ ಮಾಡಿದ್ದಾರೆ.

ಯಾರು ಎಂ ನಾಗೇಶ್ವರ್ ರಾವ್?

ಸಿಬಿಐಗೆ 2019ರಲ್ಲಿ 22 ದಿನಗಳ ಮಟ್ಟಿಗೆ ಮಧ್ಯಂತರ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಸಿಬಿಐ ಜಂಟಿ ನಿರ್ದೇಶಕರಾಗಿದ್ದರು. 2016ರಿಂದ ನಿವೃತ್ತಿವರೆಗೂ ಸಿಬಿಐನಲ್ಲಿಯೇ ಕೆಲಸ ಮಾಡಿದ್ದರು. 1986ರ ಬ್ಯಾಚ್​ನ ಐಪಿಎಸ್​ ಅಧಿಕಾರಿ. ಒಡಿಶಾ ಕೆಡಾರ್​ನ ಅಧಿಕಾರಿಯಾಗಿದ್ದವರು. ಮೂಲತಃ ತೆಲಂಗಾಣ ರಾಜ್ಯದ ವರಂಗಲ್ ಜಿಲ್ಲೆಯವರು.