ಮಂಗಳೂರಿಗೆ ಹೊರಟ್ಟಿದ್ದ KSRTC ನಾನ್​ ಎಸಿ ಸ್ಲೀಪರ್​ ಬಸ್​ನಲ್ಲಿ ಮಹಿಳೆಯ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ ಪ್ರಯಾಣಿಕ..!

ಮಂಗಳೂರಿಗೆ ಹೊರಟ್ಟಿದ್ದ ಕೆಎಸ್​ಆರ್​ಟಿಸಿ ನಾನ್​ ಎಸಿ ಸ್ಲೀಪರ್​ ಬಸ್​ನಲ್ಲಿ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.

ವಿಜಯಪುರದಿಂದ ಮಂಗಳೂರಿಗೆ ಹೊರಟ್ಟಿದ್ದ ಕೆಎಸ್​ಆರ್​ಟಿಸಿ ನಾನ್​ ಎಸಿ ಸ್ಲೀಪರ್​ನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಕೃತ್ಯ ನಡೆದಿರುವ ಕೆಎಸ್​​ಆರ್​ಟಿಸಿ ಬಸ್​ ನೋಂದಣಿ ಸಂಖ್ಯೆ ಕೆಎ 19, ಎಫ್​-3554.

ನಾನ್​ ಸ್ಲೀಪರ್​ ಬಸ್​ನ ಮೇಲ್ಭಾಗದಲ್ಲಿ ಮಲಗಿದ್ದ ವರ್ಷದ ಪ್ರಯಾಣಿಕ ಕೆಳಗಿನ ಆಸನದಲ್ಲಿ ಮಲಗಿದ್ದ 20 ವರ್ಷದ ಪ್ರಯಾಣಿಕರ ಸೀಟಿನ ಮೇಲೆ ಕೃತ್ಯ ಎಸಗಿದ್ದಾನೆ.

ಹುಬ್ಬಳ್ಳಿಯ ಕೆರಸೂರು ಡಾಬಾದ ಬಳಿ ಊಟಕ್ಕೆ ನಿಲ್ಲಿಸಿದ್ದಾಗ ಕೃತ್ಯ ಎಸಗಿದ್ದಾನೆ. ಊಟಕ್ಕೆ ನಿಲ್ಲಿಸಿದ್ದಾಗ ಆಕೆ ಬಸ್​ನಿಂದ ಇಳಿದು ಹೊರಹೋಗಿ ವಾಪಸ್​ ಬಂದಾಗ ಕಿಡಿಗೇಡಿ ಪ್ರಯಾಣಿಕ ಕೃತ್ಯ ಎಸಗಿರುವುದು ಗೊತ್ತಾಗಿದೆ.

ಕೃತ್ಯ ಎಸಗಿದವನು ಮೆಕ್ಯಾನಿಕಲ್​ ಇಂಜಿನಿಯರ್​ ಆಗಿದ್ದು ಈತ ವಿಜಯಪುರದಿಂದ ಮಂಗಳೂರಿಗೆ ಹೊರಟ್ಟಿದ್ದ. ಈತ ಕುಡಿದ ಮತ್ತಲ್ಲಿದ್ದ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here