BREAKING: ಆಟೋ ಸೇವೆ ನಿಲ್ಲಿಸುವಂತೆ Ola, Uber, Rapidoಗೆ ಆದೇಶ

ಬೆಂಗಳೂರು (Bangalore, Bengaluru) ಸೇರಿದಂತೆ ಕರ್ನಾಟಕದಲ್ಲಿ ಸೇವೆಗಳನ್ನು ನಿಲ್ಲಿಸುವಂತೆ ಓಲಾ, ಊಬರ್​, ರ್ಯಾಪಿಡೋಗೆ ಸಾರಿಗೆ ಇಲಾಖೆ ಆದೇಶಿಸಿದೆ. ಅಂದರೆ ಇನ್ಮುಂದೆ Ola, Uber, Rapidoದಲ್ಲಿ ಆಟೋ ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ.

ಈ ಮೂರು APP ಆಧಾರಿತ ಕಂಪನಿಗಳು ನೀಡುತ್ತಿದ್ದ ಆಟೋ ಬುಕ್ಕಿಂಗ್​ (Auto Booking) ಸೇವೆಯನ್ನು ಸಾರಿಗೆ ಇಲಾಖೆ (Transport Department) ಅಕ್ರಮ ಎಂದು ಪರಿಗಣಿಸಿ ಆದೇಶಿಸಿದೆ. ನಿಯಮಗಳ ಪ್ರಕಾರ ಕೇವಲ ಕ್ಯಾಬ್​, ಟ್ಯಾಕ್ಸಿಗಳಿಗಷ್ಟೇ APP ಆಧಾರಿತ ಬುಕ್ಕಿಂಗ್​ಗೆ ಅನುಮತಿ ಇದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಆಟೊ ಬುಕ್ಕಿಂಗ್​ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿದ ಮೂಲದರದ (Base Fare) ಬದಲು 100 ರೂಪಾಯಿ ಕನಿಷ್ಠ ದರ ವಸೂಲಿ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.

ಮೂರು ದಿನದೊಳಗೆ ಆಟೋ ಬುಕ್ಕಿಂಗ್​ ನಿಲ್ಲಿಸುವಂತೆ ಸೂಚಿಸಲಾಗಿದೆ.

ನಿಯಮಗಳ ಪ್ರಕಾರ ಮೊದಲ ಎರಡು ಕಿಲೋ ಮೀಟರ್​ ದೂರವರೆಗೆ ಆಟೋ ಪ್ರಯಾಣಕ್ಕೆ ಸರ್ಕಾರ ವಿಧಿಸಿರುವ ಕನಿಷ್ಠ ದರ 30 ರೂಪಾಯಿ ಮತ್ತು ಬಳಿಕ ಕನಿಷ್ಠ ದರದ ಜೊತೆಗೆ ಪ್ರತಿ 1 ಕಿಲೋ ಮೀಟರ್​​ಗೆ 15 ರೂಪಾಯಿ ನೀಡಬೇಕಾಗುತ್ತದೆ.

ಆದರೆ APP ಆಧಾರಿತ ಕಂಪನಿಗಳು ಪ್ರಯಾಣಿಕರಿಗೆ 2 ಕಿಲೋ ಮೀಟರ್​ ಒಳಗಿನ ಪ್ರಯಾಣಕ್ಕೆ 100 ರೂಪಾಯಿ ವಸೂಲಿ ಮಾಡಿ ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.