ಎರಡು ರೈಲುಗಳ ಹೆಸರು ಬದಲಾವಣೆ – ಹೊಸ ಹೆಸರು

Train
ಎರಡು ರೈಲುಗಳ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ.
ಟಿಪ್ಪು ಎಕ್ಸ್​ಪ್ರೆಸ್ ( Tippu Express)​​ ರೈಲಿನ ಹೆಸರನ್ನು ಒಡೆಯರ್​ ಎಕ್ಸ್​ಪ್ರೆಸ್​ (Wodeyar Express) ಎಂದು ಮರು ನಾಮಕರಣ ಮಾಡಲಾಗಿದೆ.
ಮೈಸೂರು-ತಾಳಗುಪ್ಪ ಎಕ್ಸ್​ಪ್ರೆಸ್​ (Mysuru – Talaguppa Express) ರೈಲಿಗೆ ಕುವೆಂಪು ಎಕ್ಸ್​ಪ್ರೆಸ್ (Kuvempu Express)​ ಎಂದು ರೈಲ್ವೆ ಸಚಿವಾಲಯ ಮರು ನಾಮಕರಣ ಮಾಡಿದೆ.
ಮೈಸೂರು-ಬೆಂಗಳೂರು (Mysuru-Bangalore) ನಡುವೆ ಸಂಚರಿಸುವ 12613/12614 ಸಂಖ್ಯೆಯ ರೈಲಿಗೆ ಟಿಪ್ಪು ಎಕ್ಸ್​ಪ್ರೆಸ್​ ಎಂದು ಇದುವರೆಗೂ ಕರೆಯಲಾಗುತ್ತಿತ್ತು.
16221/16222 ಸಂಖ್ಯೆಯ ಮೈಸೂರು-ತಾಳಗುಪ್ಪ ನಡುವಿನ ರೈಲಿಗೆ ಕುವೆಂಪು ಎಕ್ಸ್​ಪ್ರೆಸ್​ ಎಂದು ಮರು ನಾಮಕರಣ ಮಾಡಲಾಗಿದೆ.