ತಿರುಪತಿ -ತಿರುಮಲದಲ್ಲಿ (Tirupati – Titamala) ಭಕ್ತರ ಸಂಖ್ಯೆ ವಿಪರೀತವಾಗಿದೆ. ತಮಿಳರ ಪೇರಟಾಸಿ ಮಾಸದ (Perataasi – Tamil month ) ಮೂರನೇ ಶನಿವಾರವಾದ ಇಂದು ತಮಿಳುನಾಡಿನಿಂದ ಭಾರೀ ಸಂಖ್ಯೆಯ ಭಕ್ತರು ತಿರುಮಲಕ್ಕೆ ಧಾವಿಸಿದ್ದಾರೆ.
ವೈಕುಂಠಮ್ ಕ್ಯೂ ಕಾಂಪ್ಲೆಕ್ಸ್ (Vaikuntam Q Complex), ನಾರಾಯಣಗಿರಿ ಶೆಡ್ (Narayanagiri shed)ಗಳು ತುಂಬಿ ಹೋಗಿವೆ. ರಿಂಗ್ ರಸ್ತೆಯ ಗೋಗರ್ಭ ಡ್ಯಾಮ್ ವರೆಗೂ (Ring Road Gogarbha Dam)ಸರತಿ ಸಾಲು ಇದೆ. ಹೆಚ್ಚು ಕಡಿಮೆ ಆರು ಕಿಲೋಮೀಟರ್ ದೂರದವರೆಗೂ ಕ್ಯೂ (Six Kilometers Q for Swami Darshan) ಕಂಡುಬರುತ್ತಿದೆ. ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಕನಿಷ್ಠ 48 ಗಂಟೆ ಹಿಡಿಯುತ್ತಿದೆ.
ರಶ್ ಜಾಸ್ತಿ ಇದೆ.. ಭಕ್ತರು ಸಂಯಮ ಕಾಪಾಡಬೇಕು. ದರ್ಶನಕ್ಕೆ 48 ಗಂಟೆ ಹಿಡಿಯಲಿದೆ (48hours for Tirumala thimmappa Darshan). ಭಕ್ತರಿಗೆ ತೊಂದರೆ ಆಗದ ರೀತಿಯಲ್ಲಿ ನೀರು, ಹಾಲು, ಆಹಾರ ಸೇವೆಗಳನ್ನು ಅವರು ನಿಂತಿರುವ ಜಾಗಕ್ಕೆ ಒದಗಿಸಲಾಗುತ್ತಿದೆ ಎಂದು ಟಿ ಟಿ ಡಿ (TTD) ಇ ಓ ಧರ್ಮರೆಡ್ಡಿ ಮಾಹಿತಿ ನೀಡಿದ್ದಾರೆ.
ಭಕ್ತರ ಸಂಖ್ಯೆ ವಿಪರೀತವಾಗಿರುವ ಕಾರಣ ಎಲ್ಲಾ ರೂಮ್ ಭರ್ತಿ ಆಗಿವೆ. ತಿರುಮಲದಲ್ಲಿ ಕಾಲಿಡೋಕೆ ಆಗದಷ್ಟು ಜನ ಸಂದಣಿ ಇದೆ.