Ola: ಎಲೆಕ್ಟ್ರಿಕ್​ ಕಾರು ಉತ್ಪಾದನೆಗಿಳಿದ ಓಲಾ – ಏನಿರಲಿದೆ ಹೊಸ ಕಾರಿನಲ್ಲಿ..? ಇಲ್ಲಿದೆ ಮಾಹಿತಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು (India Independence Day) ಓಲಾ ಕಂಪನಿಯ (Ola) ಮಾಲೀಕ ಭವೀಶ್​ ಅಗರ್​ವಾಲ್​ (Bhavish Aggarwal) ಅವರು ಎಲೆಕ್ಟ್ರಿಕ್​ ಆಟೋ ಮೊಬೈಲ್​ ಕ್ಷೇತ್ರದಲ್ಲಿ ತಮ್ಮ ಹೊಸ ಅಭಿಲಾಷೆ ಮತ್ತು ಆಕಾಂಕ್ಷೆಯನ್ನು ಬಹಿರಂಗೊಳಿಸಿದ್ದಾರೆ.
ಜಪಾನ್​ ಮೂಲದ ಸಾಫ್ಟ್​ಬ್ಯಾಂಕ್​ ಗ್ರೂಪ್ (Soft Bank)​ ಬೆಂಬಲಿತ ಓಲಾ ಎಲೆಕ್ಟ್ರಿಕ್ (Ola Electric)​ 2024ರ ವೇಳೆಗೆ ಭಾರತದಲ್ಲಿ ಒಂದು ಬಾರಿ ಚಾರ್ಜ್​ ಮಾಡಿದರೆ 500 ಕಿಲೋ ಮೀಟರ್​ ಪ್ರಯಾಣಿಸುವ ಕಾರನ್ನು ಉತ್ಪಾದಿಸುವ ಘೋಷಣೆ ಮಾಡಿದ್ದಾರೆ.
ಓಲಾ ಎಲೆಕ್ಟ್ರಿಕ್​ ಕಾರು, ಓಲಾ ಎಲೆಕ್ಟ್ರಿಕ್​ ಸ್ಕೂಟರ್ (Ola Scooter)​ ಮತ್ತು ಇಥಿಯಂ ಬ್ಯಾಟರಿಗಳನ್ನು ಉತ್ಪಾದಿಸುವ ಅತೀ ದೊಡ್ಡ ಉತ್ಪಾದಕ ಸ್ಥಾವರನ್ನು ಸ್ಥಾಪಿಸಲಿದೆ. ಈ ಮೂಲಕ ಈಗಿರುವ ಓಲಾ ಎಲೆಕ್ಟ್ರಿಕ್​ ಸ್ಕೂಟರ್​ ಸ್ಥಾವರ (Ola Plant) ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಲಿದೆ.
ಓಲಾ ಮಾಲೀಕರ ಹೊಸ ಲೆಕ್ಕಾಚಾರಗಳು:
– ತಮಿಳುನಾಡು (Tamilnadu) ರಾಜ್ಯದ ಪೊಚಾಂಪಲ್ಲಿಯಲ್ಲಿರುವ ಓಲಾ ಎಲೆಕ್ಟ್ರಿಕ್​ ಫ್ಯೂಚರ್​ ಫ್ಯಾಕ್ಟರಿ ವಿಸ್ತರಣೆ
– ಹೊಸದಾಗಿ 100 ಎಕರೆಯಲ್ಲಿ ಲಿಥಿಯಂ ಇಯಾನ್​ ಬ್ಯಾಟರಿ ಉತ್ಪಾದನಾ ಸ್ಥಾವರ
– 200 ಎಕರೆಯಲ್ಲಿ ಎಲೆಕ್ಟ್ರಿಕ್​ ಕಾರು ಉತ್ಪಾದನಾ ಸ್ಥಾವರ
– 40 ಎಕರೆಯಲ್ಲಿ ಹೊಸದಾಗಿ ಓಲಾ ಎಲೆಕ್ಟ್ರಿಕ್​ ಸ್ಕೂಟರ್​ ಉತ್ಪಾದನಾ ಸ್ಥಾವರ ಸ್ಥಾಪನೆ
ಉತ್ಪಾದನೆ ಎಷ್ಟು..?
ಮೂರು ಸ್ಥಾವರಗಳಲ್ಲಿ ಓಲಾ ಮಾಲೀಕ ಭವೀಶ್​ ಅಗರ್​ವಾಲ್​ ಹೊಸ ಗುರಿ ಘೋಷಿಸಿದ್ದಾರೆ.
– ಓಲಾ ಸ್ಕೂಟರ್​​ ಫ್ಯಾಕ್ಟರಿಯಲ್ಲಿ ವರ್ಷಕ್ಕೆ 1 ಕೋಟಿ ಎಲೆಕ್ಟ್ರಿಕ್​ ಸ್ಕೂಟರ್​ ಉತ್ಪಾದನೆ
– ಓಲಾ ಕಾರು ಫ್ಯಾಕ್ಟರಿಯಲ್ಲಿ ವರ್ಷಕ್ಕೆ 10 ಲಕ್ಷ ಎಲೆಕ್ಟ್ರಿಕ್​ ಕಾರು ಉತ್ಪಾದನೆ
– ಓಲಾ ಗಿಗಾ ಫ್ಯಾಕ್ಟರಿಯಲ್ಲಿ ವರ್ಷಕ್ಕೆ 100 ಗಿಗಾ ವ್ಯಾಟ್​ ಬ್ಯಾಟರಿಗಳ ಉತ್ಪಾದನೆ
ಓಲಾ ಎಲೆಕ್ಟ್ರಿಕ್​ ಕಾರು ವಿಶೇಷತೆ ಏನಿರಲಿದೆ..?
– ಒಂದು ಬಾರಿ ಚಾರ್ಜ್​ ಆದರೆ 500 ಕಿಲೋ ಮೀಟರ್​ ದೂರ ಕ್ರಮಿಸಬಹುದು.
– ಕೇವಲ 4 ಸೆಕೆಂಡ್​ನಲ್ಲಿ ಗಂಟೆಗೆ 100 ಕಿಲೋ ಮೀಟರ್​ ವೇಗವನ್ನು ಪಡೆದುಕೊಳ್ಳಲಿದೆ.
– ಭಾರತದಲ್ಲಿ ಇದುವರೆಗೆ ಉತ್ಪಾದಿಸಲಾದ ಕಾರುಗಳಲ್ಲೇ ಅತ್ಯಂತ ಸ್ಪೋರ್ಟಿ ಕಾರು ಇದಾಗಿರಲಿದೆ
– ಓಲಾ ಎಲೆಕ್ಟ್ರಿಕ್​ ಕಾರಿನ ರೂಫ್​ ಟಾಪ್​ ಸಂಪೂರ್ಣ ಗಾಜು ಮಯವಾಗಿರಲಿದೆ
– ಕೀ ಲೆಸ್​ ಮತ್ತು ಹ್ಯಾಂಡ್​ಲೆಸ್​ ಬಾಗಿಲುಗಳಿರಲಿವೆ
– ಒಂದು ಕಿಟಕಿಯ ಕಡೆ ಕಂಪ್ಯೂಟರ್​ ಕೂಡಾ ಇರಲಿದೆ
– ಓಲಾ ಎಲೆಕ್ಟ್ರಿಕ್​ ಕಾರು ತನ್ನದೇ MoveOS ಸಾಫ್ಟ್​ವೇರ್​ ಕೂಡಾ ಇರಲಿದೆ.

LEAVE A REPLY

Please enter your comment!
Please enter your name here